ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಸಿಂಪಲ್ ಹೀರೋ ರಕ್ಷಿತ್ ಶೆಟ್ಟಿ

Promotion

ಬೆಂಗಳೂರು:ಜುಲೈ-2:(www.justkannada.in) ಸಿಂಪಲ್ ಹೀರೋ ರಕ್ಷಿತ್ ಶೆಟ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಬಾಲಿವುಡ್ ಗೂ ಎಂಟ್ರಿ ನೀಡಲಿದ್ದಾರೆ. ಹೌದು. ಸಚಿನ್‌ ನಿರ್ದೇಶನದ, ಪುಷ್ಕರ್ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರ ಕನ್ನಡದ ಜತೆ ಹಿಂದಿ ಭಾಷೆಯಲ್ಲೂ ಬಿಡುಗಡೆ ಮಾಡಾಲು ಸಿದ್ಧತೆ ನಡೆದಿದ್ದು, ಈ ಮೂಲಕ ರಕ್ಷಿತ್ ಶೆಟ್ಟಿ ಬಾಲಿವುಡ್ ಗೂ ಪದಾರ್ಪಣೆ ಮಾಡಲಿದ್ದಾರೆ

ಈ ಕುರಿತು ಸ್ವತ: ನಿರ್ಮಾಪಕ ಪುಷ್ಕರ್ ಅವರು ಹೇಳಿಕೆ ನೀಡಿದ್ದು, ಉತ್ತರ ಭಾರತದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಗೂ ಬಾಲಿವುಡ್‌ ಸಿನಿಮಾ ರೇಂಜಿಗೆ ಈ ಸಿನಿಮಾ ತೆಗೆಯಬೇಕಿತ್ತು. ಕ್ವಾಲಿಟಿಯಲ್ಲಿ ಯಾವುದೇ ರೀತಿ ಕಾಂಪ್ರಮೈಸ್‌ ಮಾಡಿಕೊಳ್ಳಲು ನಾವು ಸಿದ್ಧರಿರಲಿಲ್ಲ. ಸ್ಕ್ರಿಪ್ಟ್‌ಗೆ ಬೇಕಾಗುವಂತೆ ದೊಡ್ಡ ದೊಡ್ಡ 19 ಸೆಟ್‌ಗಳನ್ನು ಹಾಕಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶೇ. 90ರಷ್ಟು ಚಿತ್ರ ಈ ಸೆಟ್‌ಗಳಲ್ಲೇ ಚಿತ್ರೀಕರಣವಾಗಿದೆ. ಹಳೆಯ ಕಾಲದ ರೆಟ್ರೋ ಪಬ್‌, ಕಾಡು ಹೀಗೆ ಎಲ್ಲವನ್ನೂ ಸೆಟ್‌ನಲ್ಲೇ ಕ್ರಿಯೇಟ್‌ ಮಾಡಿದ್ದೇವೆ. ಹಳ್ಳಿಯ ಕಾಲೋನಿ, ಕೋಟೆಯ ಹೊರಗಿನ ಮತ್ತು ಒಳಗಿನ ಸೆಟ್‌ಗಳು, ಮತ್ತಿತರ ಸೆಟ್‌ಗಳೂ ಕೂಡ ಇವೆ. ಮಾಸ್‌ ಎಂಟರ್‌ಟೇನರ್‌ ಚಿತ್ರ ಇದಾಗಿದ್ದು, ಯೂನಿವರ್ಸಲ್‌ ಆಗಿ ಎಲ್ಲರಿಗೂ ಇಷ್ಟವಾಗುವಂತೆ ಚಿತ್ರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಆಗಸ್ಟ್ ನಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದ್ದು, ಕನ್ನಡದ ಜತೆಗೆ ಹಿಂದಿಯಲ್ಲೂ ಚಿತ್ರ ಬಿಡಿಗಡೆಗೆ ಸಿದ್ಧತೆ ನಡೆದಿದೆ ಎಂದಿದ್ದಾರೆ.

ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಸಿಂಪಲ್ ಹೀರೋ ರಕ್ಷಿತ್ ಶೆಟ್ಟಿ
Sandalwood,Bollywood,avane shrimannarayana,rakshit shetty