ಸಮಂತಾಸ್‌ ಲಕ್ಷ್ಯುರಿ ಡಿಸೈನರ್‌ ವಸ್ತ್ರ ಪ್ರದರ್ಶನಕ್ಕೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ

Promotion

ಬೆಂಗಳೂರು,ಜನವರಿ,17,2021(www.justkannada.in) : ಸಾಂಪ್ರದಾಯಿಕ ಹಾಗೂ ಜಾನಪದ ಕಲೆಗಳಷ್ಟೇ ಅಲ್ಲದೆ ಅತ್ಯಂತ ಮನಮೋಹಕವಾದ  ಜವಳಿ ಉತ್ಪನ್ನಗಳ ತಯಾರಿಕೆಯಲ್ಲೂ ಒಡಿಶಾ ಮುಂಚೂಣಿಯಲ್ಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.jk-logo-justkannada-mysore

ಬೆಂಗಳೂರಿನಲ್ಲಿ ಭಾನುವಾರ ಒಡಿಶಾದ ಸಂಸದ ಡಾ.ಅಚ್ಯುತ ಸಮಂತ ಅವರ ʼಸಮಂತಾಸ್‌ʼ ಲಕ್ಷ್ಯುರಿ ಡಿಸೈನರ್‌ ಹೌಸ್‌ ಏರ್ಪಡಿಸಿದ್ದ ವಸ್ತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಉನ್ನತ ಸಾಧನೆ ಮಾಡಿರುವ ಸಮಂತ ಅವರು ಇದೀಗ ಸಮಂತಾಸ್‌ ಬ್ರ್ಯಾಂಡ್‌ ಹೆಸರಿನಲ್ಲಿ ರಾಜ್ಯದಲ್ಲಿ ವಸ್ತ್ರ ಪ್ರದರ್ಶನ ಏರ್ಪಡಿಸಿರುವುದು ಖುಷಿಯ ಸಂಗತಿ ಎಂದರು.

ಈ ಮೂಲಕ ಕರ್ನಾಟಕ ಮತ್ತು ಒಡಿಶಾ ನಡುವೆ ಸಾಂಸ್ಕೃತಿಕತೆಯ ವಿನಿಮಯ ಆಗುತ್ತಿದೆ. ಆ ರಾಜ್ಯದ ಸಾಂಸ್ಕೃತಿಕ ವೈಭವಕ್ಕೆ ನಾನು ಮಾರು ಹೋಗಿದ್ದೇನೆ. ಸಮಂತ ಅವರು ಒಡಿಶಾದ ಕಲಾ ಸೊಬಗನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಅನೇಕ ಕಲಾ ಪ್ರಕಾರಗಳಿಗೆ ಆ ರಾಜ್ಯ ಹೆಸರುವಾಸಿಯಾಗಿದೆ. ಅದೆಲ್ಲವೂ ಇಲ್ಲಿ ಕಾಣುತ್ತಿದೆ ಎಂದು ಡಿಸಿಎಂ ಹೇಳಿದರು. Samantha's-Luxury-Designer-Costume-Show-DCM Dr.C.N.Ashwaththanarayana

 

ಒಡಿಶಾ ಕಳಿಂಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಚ್ಯುತ ಸಮಂತ, ಸಂಸದ ತೇಜಸ್ವಿ ಸೂರ್ಯ, ಶಿಕ್ಷಣ ತಜ್ಞ ಡಾ.ಹೂಡೆ ಕೃಷ್ಣ, ಚಲನಚಿತ್ರ ನಿರ್ದೇಶಕ ಶೇಷಾದ್ರಿ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್‌ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

key words : Samantha’s-Luxury-Designer-Costume-Show-DCM Dr.C.N.Ashwaththanarayana