ಅನಾರೋಗ್ಯದ ಹಿನ್ನೆಲೆಯಲ್ಲಿ ಸಾಲುಮರದ ತಿಮ್ಮಕ್ಕೆ ಆಸ್ಪತ್ರೆಗೆ ದಾಖಲು

Promotion

ಹಾಸನ, ಮೇ 22, 2020 (www.justkannada.in): ಅನಾರೋಗ್ಯದ ಹಿನ್ನಲೆಯಲ್ಲಿ ಶತಾಯುಷಿ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತೀವ್ರ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿ ಅಸ್ವಸ್ಥರಾಗಿದ್ದ ತಿಮ್ಮಕ್ಕನವರನ್ನು ಹಾಸನ ನಗರದ ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದತ್ತು ಪುತ್ರ ಬಳ್ಳೂರು ಉಮೇಶ್ ಅವರ ಸ್ವಗ್ರಾಮ ಬೇಲೂರಿನ ತಾಲ್ಲೂಕಿನ ಬಳ್ಳೂರು ಗ್ರಾನದಲ್ಲಿ ಕಳೆದೆರಡು ತಿಂಗಳಿನಿಂದ ತಿಮ್ಮಕ್ಕ ನೆಲೆಸಿದ್ದಾರೆ.

ಹೊಟ್ಟೆ ನೋವು, ವಾಂತಿ, ಭೇದಿಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಸಧ್ಯವೇ ಆರೋಗ್ಯ ಸುಧಾರಣೆ ಗಮನಿಸಿ ಆಸ್ಪತ್ರೆಯಿಂಡ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ ಬಳ್ಕೂರು ಉಮೇಶ್ ಹೇಳಿದ್ದಾರೆ.