ಮೈಸೂರು ವಿವಿ ಸೇರಿದಂತೆ ರಾಜ್ಯದ ಪ್ರಮುಖ ವಿವಿಗಳ ಜತೆ ಇಂಗ್ಲೆಂಡ್ ನ ಸಾಲ್ಫೋರ್ಡ್ ವಿವಿ ಸಹಭಾಗಿತ್ವಕ್ಕೆ ಗ್ರೀನ್ ಸಿಗ್ನಲ್

 

ಮೈಸೂರು, ಜ.25, 2020 : (www.justkannada.in news) ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್‌ನ ಸಾಲ್ಫೋರ್ಡ್‌ ನಗರದಲ್ಲಿರುವ ಸಾಲ್ಫೋರ್ಡ್ ವಿಶ್ವವಿದ್ಯಾಲಯವು ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಮೈಸೂರು ವಿವಿ ಸೇರಿದಂತೆ ರಾಜ್ಯದ ಪ್ರಮುಖ ವಿವಿಗಳ ಜತೆ ಸಹಭಾಗಿತ್ವಕ್ಕೆ ಮುಂದಾಗಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ನಿಯೋಗ ಮತ್ತು ಮೈಸೂರು ವಿವಿ, ವಿಟಿಯು, ದಾವಣಗರೆ ವಿಶ್ವವಿದ್ಯಾಲಯದ ಉಪಕುಲಪತಿಗಳು ಕರ್ನಾಟಕದ ಸಹಯೋಗಕ್ಕೆ ಸಂಬಂಧಿಸಿದಂತೆ ಜನವರಿ 21 ರಿಂದ 23 ರವರೆಗೆ ಸಾಲ್ಫೋರ್ಡ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೆಲನ್ ಮರ್ಶಲ್ ಜತೆಗೆ ಸರಣಿ ಚರ್ಚೆ ನಡೆಸಿದರು.ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಪ್ರೊ. ಕೋರಿ ಮತ್ತು ಡಾ. ಪ್ರದೀಪ್ ಈ ನಿಯೋಗದ ಜತೆಗಿದ್ದರು.

ಈ ವೇಳೆ ಮೈಸೂರು ವಿವಿ ಕುಲಪತಿ ಫ್ರೊ. ಜಿ ಹೇಮಂತ ಕುಮಾರ್ ಅವರ ಪ್ರಸ್ತಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾಲ್ಫೋರ್ಡ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹೆಲನ್ ಮರ್ಶಲ್ , ಮೈಸೂರು ವಿವಿ ಜತೆಗೆ ಸಹಭಾಗಿತ್ವಕ್ಕೆ ಹಸಿರು ನಿಶಾನೆ ತೋರಿಸಿದರು.

Salford university wishes to Collaborate with university of mysore
Mysore university vice-chancellor prof.g.hemanth kumar with Professor Helen Marshall Vice-Chancellor Salford University Manchester.

ಆರಂಭದಲ್ಲಿ ಸಾಲ್ಫೋರ್ಡ್ ವಿಶ್ವವಿದ್ಯಾಲಯವು ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಕರಿಸಲು ಮುಂದಾಗಿದೆ…
* ಸುಧಾರಿತ ಪ್ರದೇಶಗಳಲ್ಲಿ ಶಿಕ್ಷಕರ ತರಬೇತಿ ಕಾರ್ಯಕ್ರಮ ( Teacher training program in Advanced areas)
* ನೈಸರ್ಗಿಕ ವಿಜ್ಞಾನ ವಿಭಾಗದೊಂದಿಗೆ ಸುಧಾರಿತ ಸಂಶೋಧನೆ ( Advanced research with Natural science department )
* ನಿರ್ವಹಣೆ ಮತ್ತು ಮಾಧ್ಯಮ ಸಂವಹನ (Management and Media Communications )

ಈ ಎಲ್ಲಾ ಜಂಟಿ ಕಾರ್ಯಕ್ರಮಗಳಿಗೆ ಅವಶ್ಯಕವಿರುವ ಆರ್ಥಿಕ ಸಹಾಯಕ್ಕಾಗಿ ಇಂಗ್ಲೆಂಡ್ ಸರ್ಕಾರಕ್ಕೆ ಜಂಟಿ ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.

ಜತೆಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ಅನ್ವೇಷಿಸಲು, ಹಾಗೂ ನಿರ್ವಹಣೆ ಮತ್ತು ಇತರ ಸಂಬಂಧಿತ ವಿಷಯಗಳಲ್ಲಿ ಅವಳಿ ಪದವಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಸಹ ಈ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.

key words : Salford university wishes to Collaborate with university of mysore

ENGLISH SUMMARY :

Prof G Hemantha Kumar along with the delegation from Higher Education Council Karnataka Government and Vice Chancellors from VTU and Davanagere University had series of discussion with various departments of Salford University from 21st Jan to 23 rd Jan 2020 with regard to collaboration in Karnataka.
At the outset Salford university wishes to Collaborate with our universities in the following domains.
To explore student exchange program and research programs and also decided to design twinning degree programs in management and other allied subjects.
Prof Kori and Dr Pradeep Higher Education Department was also present in the delegation.