ಉಕ್ರೇನ್’ನ ಮೂರು ನಗರಗಳಲ್ಲಿ ಮತ್ತೆ ಕದನ ವಿರಾಮ ಘೋಷಿಸಿದ ರಷ್ಯಾ

Promotion

ಧಾರವಾಡ, ಮಾರ್ಚ್ 06, 2022 (www.justkannada.in): ಉಕ್ರೇನ್ ನ ಮತ್ತೆ ಮೂರು ನಗರಗಳಲ್ಲಿ ಕದನ ವಿರಾಮವನ್ನು ರಷ್ಯಾ ಘೋಷಣೆ ಮಾಡಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ 11ನೇ ದಿನಕ್ಕೆ ಕಾಲಿಟ್ಟಿದ್ದು, ಹಲವೆಡೆಗಳಲ್ಲಿ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ನಡುವೆ ಇದೀಗ ಮೂರು ನಗರಗಳಲ್ಲಿ ಕದನ ವಿರಾಮ ಘೋಷಿಸಲಾಗಿದೆ.

ಮಾರಿಯುಪೋಲ್, ವೊಲ್ನೊವಾಖಾ, ಲುಹಾನ್ಸ್ ಕಿ ಮೂರು ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಯಿಂದ ಕದನ ವಿರಾಮ ಘೋಷಣೆ ಮಾಡಲಾಗಿದೆ.

ನಾಗರಿಕರ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೇವಲ ಎರಡುವರೆ ಗಂಟೆಗಳ ಕಾಲ ಮಾತ್ರ ಈ ಕದನ ವಿರಾಮ ಘೋಷಿಸಲಾಗಿದೆ.