ಶಬರಿಮಲೆಗೆ ತೆರಳುವ ಭಕ್ತರಿಗೆ ಈ ನಿಯಮಗಳು ಕಡ್ಡಾಯ…!

ಬೆಂಗಳೂರು,ನವೆಂಬರ್,07,2020(www.justkannada.in) : ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದ ಹಿನ್ನೆಲೆಯಲ್ಲಿ ಈ ಬಾರಿ ಶಬರಿಮಲೆಗೆ ಹೋಗುವ ಭಕ್ತರಿಗೆ ಕೆಲವು ನಿಯಮಗಳನ್ನು ಹಾಕಲಾಗಿದೆ.jk-logo-justkannada-logoನವೆಂಬರ್ 16ರಿಂದ ಅಯ್ಯಪ್ಪ ಸ್ವಾಮಿ ಯಾತ್ರೆ ಆರಂಭವಾಗುತ್ತೆ. ಆದರೆ, ಕೊರೊನಾ ಹಿನ್ನೆಲೆ ಅದು ಪ್ರತಿ ಬಾರಿ ಇದ್ದಂತೆ ಈ ಬಾರಿ ಇರುವುದಿಲ್ಲ. ಕೇರಳ ಸರ್ಕಾರದ ಆದೇಶದನ್ವಯ, ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಸುತ್ತೊಲೆ ಬಿಡುಗಡೆ ಮಾಡಿದೆ.

ನೋಂದಣಿ ಮಾಡಿಕೊಂಡವರಿಗಷ್ಟೇ ಪ್ರವೇಶಕ್ಕೆ ಅನುಮತಿ

ಶಬರಿಮಲೈ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡವರಿಗಷ್ಟೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತೆ. ಹೀಗಾಗಿ, ಯಾತ್ರೆಗೆ ತೆರಳುವ ಮುನ್ನ ನೋಂದಣಿ ಮಾಡುವುದು ಕಡ್ಡಾಯ. ಒಂದು ದಿನಕ್ಕೆ ಒಂದು ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ವಾರಾಂತ್ಯಕ್ಕೆ ಅದನ್ನು ಎರಡು ಸಾವಿರಕ್ಕೆ ಹೆಚ್ಚಿಸಲಾಗುತ್ತೆ.

48 ಗಂಟೆಯ ಮುನ್ನ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ

ದೇವರ ದರ್ಶನಕ್ಕೂ 48 ಗಂಟೆಯ ಮುನ್ನ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ. 10 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟ ಭಕ್ತರಿಗೆ ಅವಕಾಶವಿಲ್ಲ. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಹೊಂದಿರುವವರು ಯಾತ್ರೆಗೆ ಹೋಗುವಾಗ ತೆಗೆದುಕೊಂಡು ಹೋಗಬೇಕು. ಪಂಪಾನದಿ ಸ್ನಾನಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.

rules-mandatory-devotees-visiting-Sabarimala ...!

key words : rules-mandatory-devotees-visiting-Sabarimala …!