ಆರ್ ಎಸ್ ಎಸ್ ನಿಷೇಧ ನೆಹರುರಿಂದಲೇ ಆಗಿಲ್ಲ. ಪ್ರಿಯಾಂಕ್ ಖರ್ಗೆಯಿಂದ ಸಾಧ್ಯವೇ..? ಬಿಜೆಪಿ ಶಾಸಕ ಟಾಂಗ್.

Promotion

ಶಿವಮೊಗ್ಗ,ಮೇ,26,2023(www.justkannada.in): ಭಜರಂಗದಳ,  ಆರ್ ಎಸ್ ಎಸ್ ಸಂಘಟನೆ ನಿಷೇಧ ಮಾಡಲು  ನೆಹರೂರಿಂದಲೇ ಆಗಲಿಲ್ಲ. ಇನ್ನು ಸಚಿವ ಪ್ರಿಯಾಂಕ್​​ ಖರ್ಗೆ ಅವರಿಂದ ಸಾಧ್ಯವೇ…? ಎಂದು ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಚನ್ನಬಸಪ್ಪ, ಮನೆ ಮನೆಯಲ್ಲಿ ಹಿಂದುತ್ವ ಮತ್ತು ಆರ್​​ಎಸ್​​ಎಸ್ ಬೆರೆತು ಹೋಗಿದೆ. ಪ್ರಿಯಾಂಕ್​ ಖರ್ಗೆ ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ  ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಶ್ವತ್  ನಾರಾಯಣ್, ಕಾರ್ಯಕರ್ತರ ಮೇಲೆ ಕೇಸ್​ ದಾಖಲಾಗಿದೆ ಎಂದು ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

Key words: RSS – not banned -Nehru – Priyank Kharge-BJP -MLA