ಅಪ್ರಾಪ್ತ ಬಾಲಕಿಯ ಅಪಹರಣಕಾರನ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ.

Promotion

ಬೆಂಗಳೂರು, ಜುಲೈ,13,2022(www.justkannada.in) :ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರ್ಷಿತ ಎಂಬ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ವಿರಾಟ್ ಅಥವಾ ರಾಜು ಎಂದೇ ಕರೆಯಲ್ಪಡುವ ಲಿಂಗರಾಜು ಎಂಬ 26 ವರ್ಷದ ಯುವಕನ ಪತ್ತೆಗೆ ಸುಳಿವು ನೀಡಿದವರಿಗೆ 50,000 ರೂ. ನಗದು ಬಹುಮಾನವನ್ನು ನೀಡಲಾಗುವುದು ಎಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಕಟಿಸಿದ್ದಾರೆ. 

ಲಕ್ಷ್ಮೀನಾರಾಯಣ್ ಎಂಬುವವರ ಮಗನಾದ ಶಂಕಿತ ಅಪಹರಣಕಾರ ಲಿಂಗರಾಜು ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ವಾಸವಾಗಿರುವುದಾಗಿ ಬಾಲಕಿಯ ತಂದೆ ವಿನಯ್ ಕುಮಾರ್ ಎಂಬುವವರು ದೂರು ದಾಖಲಿಸಿದ್ದಾರೆ.

ಅಪಹರಣಕ್ಕೆ ಒಳಗಾದ ಬಾಲಕಿ ವರ್ಷಿತ ಹಾಗೂ ಅಪಹರಣಕಾರ ಎಂದೇ ಶಂಕಿಸಲಾಗಿರುವ ಲಿಂಗರಾಜು ಅವರ ಇರುವಿಕೆಯ ಬಗ್ಗೆ ಯಾವುದೇ ವಿವರಗಳು ಲಭ್ಯವಿದ್ದಲ್ಲಿ ಅಥವಾ ಸುಳಿವು ಇದ್ದಲ್ಲಿ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರ ಮೊಬೈಲ್ ದೂರವಾಣಿ ಸಂಖ್ಯೆ : 94808 03349 ಮತ್ತು 94495 84739 ಅಥವಾ ಶಿವಮೊಗ್ಗ ಪೊಲೀಸ್ ನಿಯಂತ್ರಣಾ ಕೊಠಡಿ ಸಂಖ್ಯೆ : 08182 – 261 413 ಮತ್ತು ಮೊಬೈಲ್ ಸಂಖ್ಯೆ : 94808 03300 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Key words: Rs 50,000-reward -information –kidnap- minor girl.