ಪಿಎಸ್ ಐ ಹಗರಣ: ಎಡಿಜಿಪಿ ಹೇಳಿಕೆಯನ್ನ ಸಾರ್ವಜನಿಕರ ಮುಂದೆ ಇಡಬೇಕು – ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಗ್ರಹ.

ಬೆಂಗಳೂರು,ಜುಲೈ,13,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಹೇಳಿಕೆಯನ್ನ ಸಾರ್ವಜನಿಕರ ಮುಂದೆ ಇಡಬೇಕು ಎಂದು ಸರ್ಕಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಇಬ್ರಾಹಿಂ, ಪಿಎಸ್ ಐ ಹಗರಣದಲ್ಲಿ ಎಡಿಜಿಪಿ ಬಂಧನವಾಗಿದೆ. ಎಡಿಜಿಪಿ ಹೇಳಿಕೆ ಸಾರ್ವಜನಿಕವಾಗಿ ಬರಬೇಕು. ಇಡಿ ಪಿಎಸ್ಐ ಹಗರಣದಲ್ಲಿ ಯಾರಿದ್ದಾರೆ ಜನರ ಮುಂದೆ ಹೇಳಿ  ಎಡಿಜಿಪಿ ಮಂಪರು ಪರೀಕ್ಷೆಯಲ್ಲಿ ಏನು ಹೇಳಿದ್ದಾರೆ ಅದನ್ನ ಸರ್ಕಾರ ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಇಬ್ರಾಹಿಂ, ಸಿದ್ಧರಾಮೋತ್ಸವ. ಶಿವಕುಮಾರೋತ್ಸವ ಮಾಡುತ್ತಿದ್ದಾರೆ. ಅವರು ಏನಾದ್ರೂ ಮಾಡಿಕೊಳ್ಳಲಿ. ನಾವು ಜನರೋತ್ಸವ ಮಾಡುತ್ತೇವೆ.  ಕಾಂಗ್ರೆಸ್, ಬಿಜೆಪಿ ಹಳೇ ಕಾಲದ ಹೀರೋ. ಹೊಸ ಹಿರೋ ಕುಮಾರಸ್ವಾಮಿ ಬರ್ತಿದ್ದಾರೆ. ಅವರನ್ನ ಗೆಲ್ಲಿಸಿ ಎಂದು  ಸಿಎಂ ಇಬ್ರಾಹಿಂ ಮನವಿ ಮಾಡಿದರು.

Key words: PSI –Scam-statement – ADGP JDS – CM Ibrahim