ಕೋವಿಡ್-೧೯ ಉಚಿತ ಲಸಿಕೆ; ಕೇಂದ್ರ ವ್ಯಯಿಸಿದ ಮೊತ್ತ 19,675 ಕೋಟಿ ರೂ.!

 

ನವ ದೆಹಲಿ, ಡಿಸೆಂಬರ್ ೨೪, ೨೦೨೧ (www.justkannada.in): ಕೇಂದ್ರ ಸರ್ಕಾರದ ದತ್ತಾಂಶಗಳ ಪ್ರಕಾರ ದೇಶದ ಜನರಿಗೆ ಕೋವಿಡ್-೧೯ ಲಸಿಕೆಗಳನ್ನು ಉಚಿತವಾಗಿ ಒದಗಿಸಲು ಕೇಂದ್ರ ಸರ್ಕಾರ ವ್ಯಯಿಸಿರುವ ಒಟ್ಟು ಮೊತ್ತ ರೂ.೧೯,೬೭೫ ಕೋಟಿಗಳಾಗಿವೆ.

ಕೇಂದ್ರ ಸರ್ಕಾರ ೨೦೨೧-೨೨ನೇ ಸಾಲಿನ ಆಯವ್ಯಯದಲ್ಲಿ ಕೋವಿಡ್-೧೯ ಲಸಿಕೆಗಳಿಗಾಗಿಯೇ ರೂ.೩೫,೦೦೦ ಕೋಟಿ ಮೊತ್ತವನ್ನು ಹಂಚಿಕೆ ಮಾಡಿತ್ತು.

ಸಾಮಾಜಿಕ ಕಾರ್ಯಕರ್ತ ಅಮಿತ್ ಗುಪ್ತಾ ಅವರು ಸಲ್ಲಿಸಿರುವ ಒಂದು ಆರ್‌ಟಿಐ ಅರ್ಜಿಗೆ ಲಭಿಸಿರುವ ಉತ್ತರದಲ್ಲಿ, “ಡಿಸೆಂಬರ್ ೨೦ರವರೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್-೧೯ ಲಸಿಕೆಗಳನ್ನು ಖರೀದಿಸಲು ಕೇಂದ್ರಕ್ಕೆ ತಗುಲಿರುವ ಒಟ್ಟು ವೆಚ್ಚ ರೂ.೧೯,೬೭೫.೪೬ ಕೋಟಿ,” ಎಂದು ಮಾಹಿತಿ ಒದಗಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್-೧೯ ಲಸಿಕಾ ನಿರ್ವಹಣಾ ಘಟಕ ಒದಗಿಸಿರುವ ಮಾಹಿತಿ ಪ್ರಕಾರ ಮೇ ೧ ರಿಂದ ಡಿಸೆಂಬರ್ ೨೦ರವರೆಗೆ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ (ಸಿವಿಸಿಗಳು) ಒಟ್ಟು ೧೧೭.೫೬ ಕೋಟಿ, ಅಂದರೆ ಶೇ.೯೬.೫ ಡೋಸ್‌ಗಳನ್ನು ನೀಡಲಾಗಿದೆ. “ಖಾಸಗಿ ಸಿವಿಸಿಗಳಲ್ಲಿ ೪.೧೮ ಕೋಟಿ ಡೋಸ್‌ಗಳನ್ನು ನೀಡಲಾಗಿದ್ದು ಈ ಪೈಕಿ ೩.೫೫ ಕೋಟಿ ಡೋಸ್‌ಗಳು ಕೋವಿಶೀಲ್ಡ್, ೦.೫೧ ಕೋಟಿ ಡೋಸ್‌ಗಳು ಕೊವ್ಯಾಕ್ಯಿನ್ ಹಾಗೂ ೦.೧೧ ಕೋಟಿ ಡೋಸ್‌ಗಳು ಸ್ಫುಟ್ನಿಕ್ ಗಿ ಲಸಿಕೆಗಳಾಗಿವೆ,” ಎಂಬ ಮಾಹಿತಿ ಲಭಿಸಿದೆ.

ಜೂನ್ ೨೧ರಿಂದ ಜಾರಿಗೊಂಡಿರುವ ರಾಷ್ಟಿçÃಯ ಕೋವಿಡ್ ಲಸಿಕಾಕರಣ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬAಧಿಸಿದ ಪರಿಷ್ಕೃತ ಮಾರ್ಗಸೂಚಿಗಳಡಿ ಸ್ಥಳೀಯ ಲಸಿಕಾ ತಯಾರಿಕಾ ಕಂಪನಿಗಳು ತಮ್ಮ ಮಾಸಿಕ ಲಸಿಕಾ ಉತ್ಪಾದನೆಯಲ್ಲಿ ಶೇ.೨೫ರಷ್ಟು ಲಸಿಕೆಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುವ ಅವಕಾಶವಿದ್ದು, ಉಳಿದ ಲಸಿಕೆಗಳನ್ನೂ ಸಹ ಭಾರತ ಸರ್ಕಾರ ಖರೀದಿಸುತ್ತದೆ.

ಚಿತ್ರ ಕೃಪೆ ; ಇಂಟರ್ ನೆಟ್

ಕೋವಿಡ್ ಪೋರ್ಟಲ್ ಪ್ರಕಾರ, ಜನವರಿ ೧೬ರಿಂದ ಲಸಿಕಾಕರಣ ಪ್ರಕ್ರಿಯೆ ಆರಂಭವಾದಾಗಿನಿAದ ಈವರೆಗೆ ೧೪೦ ಕೋಟಿಗಳಿಗೂ ಹೆಚ್ಚಿನ ಸಂಖ್ಯೆಯ ಡೋಸ್‌ಗಲನ್ನು ನೀಡಲಾಗಿದೆ. ೫೬.೭೯ ಕೋಟಿ ಜನರು ಲಸಿಕೆಯ ಎರಡೂ ಡೋಸ್‌ಗಳನ್ನೂ ಪಡೆದುಕೊಂಡಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Rs 19,675 crore spent on Covid-19 vaccine procurement

key words : rs-19675-crore-spent-on-covid-19-vaccine-procurement