ಆರ್.ಆರ್ ನಗರ ಉಪಚುನಾವಣೆ: ಕೈ ಅಭ್ಯರ್ಥಿ ಕುಸುಮಾ, ನಟಿ ಅಮೂಲ್ಯ ಸೇರಿ ಹಲವರಿಂದ ಮತದಾನ…

Promotion

ಬೆಂಗಳೂರು, ನವಂಬರ್,3,2020(www.justkannada.in):  ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಹಾಗೂ ನಟಿ ಅಮೂಲ್ಯ ಸೇರಿ ಹಲವರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.RR nagar- by-election- Vote –congress-candidate –Kusuma-actress -amulya

ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಜ್ಞಾನಭಾರತಿ ವಾರ್ಡ್​ನ 304ನೇ ಮತಗಟ್ಟೆಯಲ್ಲಿ ಕುಟುಂಬ ಸಮೇತವಾಗಿ ಬಂದು ಮತ ಚಲಾಯಿಸಿದ್ದಾರೆ.

ಇನ್ನು ನಟಿ ಅಮೂಲ್ಯಅವರು ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ.  ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್.ಆರ್. ನಗರ ಕ್ಷೇತ್ರದ ಬಿಇಟಿ ಕಾನ್ವೆಂಟ್ ಮತಗಟ್ಟೆಯಲ್ಲಿ  ನಟಿ ಅಮೂಲ್ಯ ಮತದಾನ ಮಾಡಿದರು.rr-nagar-by-election-vote-congress-candidate-kusuma-actress-amulya

ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಸಹ ಮತದಾನ ಮಾಡಿದ್ದಾರೆ. ಜ್ಞಾನಭಾರತಿಯ ಹೆಚ್ಎಂ ಆರ್ ಕಾನ್ವೆಂಟ್  ನಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

Key words: RR nagar- by-election- Vote –congress-candidate –Kusuma-actress -amulya