ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಸೇರಿ ಇಬ್ಬರ ಬರ್ಬರ ಹತ್ಯೆ…

Promotion

ಬೆಂಗಳೂರು,ಆ,26,2019(www.justkannada.in): ರೌಡಿಶೀಟರ್ ಸೇರಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಜೆಪಿ ನಗರದ 24 ನೇ ಮುಖ್ಯ ರಸ್ತೆಯಲ್ಲಿ ಈ  ಘಟನೆ ನಡೆದಿದೆ.  ರೌಡಿ ಶೀಟರ್ ಮಂಜ ಅಲಿಯಾಸ್ ತಮ್ಮ ಮಂಜ ಮತ್ತು ನವೀನ್ ಹತ್ಯೆಗೊಳಗಾದವರು . ರೌಡಿಶೀಟರ್ ತಮ್ಮ ಮಂಜ ಮೇಲೆ ತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್ ನಲ್ಲಿ ರೌಡಿಶೀಟ್ ಇದೆ ಆಕ್ಟೀವಾದಲ್ಲಿ ಹೋಗುವಾಗ ಹಿಂದಿನಿಂದ ಐ ಟ್ವೆಂಟಿ ವಾಹನದಲ್ಲಿ ಗುದ್ದಿದ ದುಷ್ಕರ್ಮಿಗಳು  ನಡು ರಸ್ತೆಯಲ್ಲಿ ಇಬ್ಬರನ್ನೂ  ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ  ಮಾಡಿದ್ದಾರೆ

ಕಾರಿನಲ್ಲಿ ಅಟ್ಟಾಡಿಸುವ ರಭಸಕ್ಕೆ ಲೈಟ್ ಕಂಬ ಮುರಿದುಬಿದ್ದಿದೆ. 200 ಮೀಟರ್ ಅಂತರದಲ್ಲಿ ಇಬ್ಬರನ್ನು 5-6 ಜನ ಹಂತಕರ ಟೀಂ ಕೊಚ್ಚಿಕೊಂದಿದೆ. ನವೀನ್ ಬಿಲ್ಡರ್ ಒಬ್ಬರ ಮಗನಾಗಿದ್ದು, ಇಂದು ರಾತ್ರಿ ತಮ್ಮ ಮಂಜನ ಜೊತೆ ಊಟಕ್ಕೆ ಹೋಗಿದ್ದ.

ತಮ್ಮ ಮಂಜನ ವಿರುದ್ಧ ಎರಡು ಕೊಲೆ ಪ್ರಕರಣ ಇತ್ತು. ಈ ಪೈಕಿ ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣ ಸಹ ಒಂದು ಸದ್ಯ, ಇದೇ ಪ್ರಕರಣದಲ್ಲಿ ಮೃತಪಟ್ಟ ರಘು ಕಡೆಯವರಿಂದಲೇ ಈ ಕೃತ್ಯ  ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.ಜೆಪಿನಗರ ಹಾಗೂ ಪುಟ್ಟೇನಹಳ್ಳಿ ಎರಡೂ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Key words: rowdy sheeter-Two – killed -Bangalore