ಡಿಸಿಎಂ ಹುದ್ದೆ ಹಾಗೂ ಖಾತೆ ಹಂಚಿಕೆ ಬಗ್ಗೆ ಇಂದೇ ನಿರ್ಧಾರ-ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ..

kannada t-shirts

ಬೆಂಗಳೂರು,ಆ,26,2019(www.justkannada.in): ಡಿಸಿಎಂ ಹುದ್ದೆ ಹಾಗೂ ಯಾರಿಗೆ ಯಾವ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಇಂದೇ ನಿರ್ಧಾರವಾಗಲಿದೆ. ಇವತ್ತು ಅಥವಾ ನಾಳೆ ಖಾತೆ ಹಂಚಿಕೆ ಹಾಗು ಡಿಸಿಎಂ ಹುದ್ದೆ ಬಗ್ಗೆ ಗೊತ್ತಾಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಅಶೋಕ್ ಹೋಟೆಲ್ ನಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ನೆರೆ ಅಧ್ಯಯನ ಮಾಡಲು ಕೇಂದ್ರದ ತಂಡ ಆಗಮಿಸಿದ್ದು ಎರಡು ದಿನದಲ್ಲಿ ಕೇಂದ್ರಕ್ಕೆ ವರದಿ ನೀಡಲಿದ್ದಾರೆ. ಕೇಂದ್ರದಿಂದ ಒಳ್ಳೆಯ ಪರಿಹಾರ ಸಿಗುತ್ತೆ. ಹಲವು ರಾಜ್ಯಗಳಲ್ಲಿ ನೆರೆ ಇದ್ರೂ ಸಹ ನಮ್ಮ ರಾಜ್ಯಕ್ಕೆ ಮೊದಲು ಟೀಮ್ ಬಂದಿದೆ. ಸಿದ್ದರಾಮಯ್ಯ ಮಾತಿಗೆ ಉತ್ತರ ಕೊಡಲ್ಲ. ಕೇಂದ್ರ ಸಕಾರಾತ್ಮಕ ವಾಗಿ ಸ್ಪಂದಿಸುತ್ತಿದೆ. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದರು.

ಇಂದು ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರಿಗೆ ಕಳಿಸಿದ್ದೀನಿ. ಸಂಜೆ ಒಳಗೆ ಖಾತೆ ಹಂಚಿಕೆ ಆಗುತ್ತೆ. ಡಿಸಿಎಂ ಹುದ್ದೆ ಯಾರಿಗೆ ಕೊಡಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words: Decision -DCM –ministrial -CM BS Yeddyurappa -bangalore

website developers in mysore