ಕೆ.ಎಸ್ ಈಶ್ವರಪ್ಪರಿಗೆ ಒಂದು ರೌಂಡ್ ಸೆಟಲ್ ​ಮೆಂಟ್​ ಆಗಿದೆ- ಡಿಸಿಎಂ ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಫೆಬ್ರವರಿ,10,2024(ww.justkannada.in): ದೇಶದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಕೆ.ಎಸ್ ಈಶ್ವರಪ್ಪ ಅವರಿಗೆ ಒಂದು ರೌಂಡ್ ಸೆಟಲ್​ ಮೆಂಟ್‌ ಆಗಿದೆ. ಹಿಂದೆ ಅಸೆಂಬ್ಲಿಯಲ್ಲಿ ಹೀಗೆ ಮಾತನಾಡಿದ್ದರು ನಿಮಗೆ ನೆನಪಿದ್ಯಾ? ನಮ್ಮ ತಂದೆಯವರನ್ನ ನೆನಪಿಸಿಕೊಂಡಿದ್ದರು. ಈಗ ಎಲ್ಲಿದ್ದಾರೆ ಈಶ್ವರಪ್ಪ ಅವರು. ಯಾರ್ಯಾರು ನಮ್ಮ ಸುದ್ದಿಗೆ ಬಂದಿದಾರೋ ಅವರಿಗೆಲ್ಲ ಒಂದೊಂದೇ ಸೆಟಲ್​ಮೆಂಟ್ ಆಗುತ್ತಿದೆ ಎಂದು ಹೇಳಿದರು.

ಗುಂಡಿಟ್ಟು ಕೊಲ್ಲುತ್ತೇನೆ ಅಂತಾರೆ ಕೊಲ್ಲಲಿ ಬಿಡಿ. ಡಿಕೆ ಸುರೇಶ್ ಅವರದು ಈ ಗುಂಡಿಗೆ ಹೆದರುವ ಬ್ಲಡ್ ಅಲ್ಲ. ಬೆಂಗಳೂರಿನಲ್ಲಿ ನಮ್ಮದೇ ಆದ ಇತಿಹಾಸವಿದೆ. ರಾಜಕಾರಣ ಮಾಡಬೇಕಾದವರು. ಹಿಂದೆನೂ‌ ಹೇಳಿದ್ದೇನೆ. ನಾವು ಹುಲ್ಲು ಗಾಡಿನ‌ ಹಿಡ್ಕೊಂಡು ಬರಲಿಲ್ಲ. ಕಿವಿ ಮೇಲೆ ಹೂ ಇಟ್ಕೊಂಡು ಬರಲಿಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words:  round -settlement – KS Eshwarappa- DCM- DK Shivakumar.