ರೋಟರಿ ಮೈಸೂರು ವತಿಯಿಂದ ವಿಶ್ವ ಅಂಗಾಗ ದಾನ ದಿನ: ‘ಪುನರ್ಜನ್ಮ’  ಜಾಗೃತಿ ಅಭಿಯಾನ…..

Promotion

ಮೈಸೂರು,ಆ,14,2019(www.justkannada.in): ವಿಶ್ವ ಅಂಗಾಂಗ ದಿನದ ಅಂಗವಾಗಿ ಮೈಸೂರು ರೋಟರಿ ವತಿಯಿಂದ ಪುನರ್ಜನ್ಮ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮೈಸೂರಿನ ರೋಟರಿ ಶಾಲೆಯಲ್ಲಿ ವಿಶ್ವ ಅಂಗಾಂಗ ದಾನ ದಿನ ಪುನರ್ಜನ್ಮ  ಜಾಗೃತಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಜಾಗೃತಿ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್  ಜೋಸೆಫ್ ಮ್ಯಾಥ್ಯೂ ಚಾಲನೆ ನೀಡಿದರು,

ಈ  ಜಾಗೃತಿ ಕಾರ್ಯಕ್ರಮಕ್ಕೆ ಅಪೊಲೊ ಆಸ್ಪತ್ರೆ, ಅನ್ನಪೋರ್ಣ ಕಣ್ಣಿನ ಆಸ್ಪತ್ರೆ, ರೋಟರಿ ಮೈಸೂರು ಮಿಡ್-ಟೌನ್, ರೋಟರಿ ಪಂಚಸೀಲ್, ಲಯನ್ಸ್ ಕ್ಲಬ್,  ಮೈಸೂರಿನ ಇನ್ನರ್ ವೀಲ್ ಕ್ಲಬ್,  ರೌಂಡ್ ಟೇಬಲ್ 156 & 256 ಸೇರಿ ಹಲವು ಸಂಸ್ಥೆಗಳು ಕೈಜೋಡಿಸಿವೆ.

ದಾನ ಮಾಡಿದ ಅಂಗ ದಾನಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗದಾನಿಗಳು ಸ್ವೀಕೃತರು ತಮ್ಮ ಅನುಭವಗಳನ್ನ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮೈಸೂರು ರೋಟರಿ ಸಹಾಯಕ ಗವರ್ನರ್-ಆರ್.ಟಿ.ಎನ್. ರಾಘವೇಂದ್ರ, ಮಜೇಶ್ ಕುಮಾರ್,  ಕಾರ್ಯದರ್ಶಿ ರವಿಶಂಕರ್,  ಇನ್ನರ್ ವ್ಹೀಲ್ ಅಧ್ಯಕ್ಷ  ಮಮತಾ ಮೋಹನ್,  ರೋಟರಿ ಮೈಸೂರು ಮಿಡ್-ಟೌನ್,  ಅಧ್ಯಕ್ಷ ಮನೋಜ್ ಕುಮಾರ್, ರೋಟರಿ ಪಂಚಶೀಲ್ ಅಧ್ಯಕ್ಷ ಪ್ರೇಮ್ ಶೆರಾಫ್ ಮತ್ತಿತರರು ಉಪಸ್ಥಿತರಿದ್ದರು.

Key words: Rotary Mysore -Organ Donation day- Awareness -Program