ಇನ್‌ಸ್ಟಾಗ್ರಾಮ್‌ನಲ್ಲಿ ಜಿಮ್‌ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿದ ರಾಬರ್ಟ್ ನಾಯಕಿ !

Promotion

ಬೆಂಗಳೂರು, ಅಕ್ಟೋಬರ್ 13, 2020 (www.justkannada.in): ನಟಿ ಆಶಾ ಭಟ್ ಜಿಮ್‌ನಲ್ಲಿ ವರ್ಕೌಟ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ದರ್ಶನ್ ನಟನೆಯ ‘ ರಾಬರ್ಟ್ ‘ ಚಿತ್ರದಲ್ಲಿ ನಟಿಸುತ್ತಿರುವ ಆಶಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ ಗಮನ ಸೆಳೆಯುತ್ತಿದೆ.

ಅಂದುಕೊಂಡಂತೆ ಆಗಿದ್ದರೆ ರಾಬರ್ಟ್ ಸಿನಿಮಾ ಏಪ್ರಿಲ್‌ನಲ್ಲಿ ತೆರೆ ಕಾಣಬೇಕಿತ್ತು . ಆದರೆ ಕೊರೋನಾ , ಮತ್ತಿತರ ಕಾರಣಾಂತರದಿಂದ ಚಿತ್ರದ ಬಿಡುಗಡೆ ಮುಂದೂಡಲಾಗಿದೆ .

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಆಶಾ ಭಟ್ ಅವರ ವರ್ಕೌಟ್ ವಿಡಿಯೋಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿವೆ .