ಚೇತನ್ ಜತೆ ಸಿಂಪಲ್ ಸುನಿ: ರೆಡಿಯಾಗುತ್ತಿದೆ ಸ್ಕ್ರೀಪ್ಟ್ !

ಬೆಂಗಳೂರು, ಅಕ್ಟೋಬರ್ 13, 2020 (www.justkannada.in): ನಟ ಚೇತನ್ ಮತ್ತು ನಿರ್ದೇಶಕ ಸುನಿ ತೆರೆ ಮೇಲೆ ಮೋಡಿ ಮಾಡಲು ಒಂದಾಗುತ್ತಿದ್ದಾರೆ.

ಚಿತ್ರಕ್ಕಾಗಿ ಸ್ಕ್ರಿಪ್ಟ್ ಸಹ ಸಿದ್ಧವಾಗಿದ್ದು ಚರ್ಚೆಗಳು ನಡೆಯುತ್ತಿವೆ. ನಿರ್ದೇಶಕರು ಮತ್ತು ನಿರ್ಮಾಪಕರು ನಿರ್ಧರಿಸಿದಂತೆ ಮತ್ತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಅಲ್ಲದೆ 2021ರಲ್ಲಿ ಚಿತ್ರ ಸೆಟ್ಟೇರಲಿದೆ.

ಏತನ್ಮಧ್ಯೆ, ಇತ್ತೀಚೆಗೆ ಅತಿರಥದಲ್ಲಿ ಕಾಣಿಸಿಕೊಂಡ ಚೇತನ್, ರಣಂ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ, ಚಿತ್ರಮಂದಿರಗಳು ತೆರೆದ ನಂತರ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಇನ್ನು ನಿರ್ದೇಶಕ ಸುನಿ ಪ್ರಸ್ತುತ ಶರಣ್ ಅವರ ಅವತಾರ ಪುರುಷ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.