ಮೈಸೂರಿನಲ್ಲಿ ದರೋಡೆ ಶೂಟ್‌ ಔಟ್ ಪ್ರಕರಣ: ಪಿಸ್ತೂಲ್ ಪೂರೈಸಿದ್ದ ಆರೋಪಿ ಬಂಧನ.

Promotion

ಮೈಸೂರು,ಸೆಪ್ಟಂಬರ್,23,2021(www.justkannada.in): ಮೈಸೂರಿನಲ್ಲಿ ದರೋಡೆ ಶೂಟ್‌ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪಿಸ್ತೂಲ್ ಪೂರೈಸಿದ್ದ ಆರೋಪಿಯನ್ನ  ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸರು ಕಾರ್ಯಾಚರಣೆ ಬಂಧಿಸಿದ್ದಾರೆ.

ಮುಂಬೈನ ರಾಜನ್ ಬಂಧಿತ ಆರೋಪಿ. ರಾಜನ್‌ ಆರೋಪಿಗಳಿಗೆ 50 ಸಾವಿರ ರೂಪಾಯಿಗೆ ಪಿಸ್ತೂಲ್ ಮಾರಾಟ ಮಾಡಿದ್ದ. ಘಟನೆ ಸಂಬಂಧ ಈಗಾಗಲೇ ಎಲ್ಲಾ ಆರೋಪಿಗಳನ್ನ ಬಂಧಿಸಲಾಗಿದೆ.ganja peddlers arrested by mysore police

ಅಗಸ್ಟ್ 23ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ ನಲ್ಲಿ ದರೋಡೆ ಶೂಟ್‌ಔಟ್ ನಡೆದಿತ್ತು. ಶೂಟ್‌ ಔಟ್‌ನಲ್ಲಿ ದಡದಹಳ್ಳಿ ಯುವಕ ಚಂದ್ರು ಸಾವನ್ನಪ್ಪಿದ್ದ. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Key words: Robbery- shootout case –Mysore-Arrest- pistol- Supply