ಮೈಸೂರು ದಸರಾ ಗಜಪಡೆಗೆ ತಾಲೀಮು: 500 ಕೆಜಿ ತೂಕ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು.

ಮೈಸೂರು,ಸೆಪ್ಟಂಬರ್,23,2021(www.justkannada.in):  ಅಕ್ಟೋಬರ್ 7 ರಂದು ವಿಶ್ವ ವಿಖ್ಯಾತ ದಸರಾ ಸಂಭ್ರಮಕ್ಕೆ ಚಾಲನೆ ಸಿಗಲಿದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ.

ಇಂದು ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯು ಆನೆಗೆ  ತೂಕ ಹೆಚ್ಚಿಸಿ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು 500 ಕೆಜಿ ತೂಕ ಹೊತ್ತು ಅರಮನೆ ಆವರಣದಲ್ಲಿ ಹೆಜ್ಜೆ ಹಾಕಿದನು. ಮೊದಲಿಗೆ 200 ಕೆ.ಜಿ ಮರಳು ಮೂಟೆ ಹೊರಿಸಿ ಭಾರದ ತಾಲೀಮು ನಡೆಸಲಾಗಿತ್ತು. ಇದೀಗ ಹಂತ ಹಂತವಾಗಿ ತೂಕ ಹೆಚ್ಚಿಸಿ ಜಂಬೂಸವಾರಿ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಇದಾದ ನಂತರ ಮರದ ಅಂಬಾರಿ ಸೇರಿ 750ಕೆ.ಜಿ ಭಾರವನ್ನ ಅಭಿಮನ್ಯು ಹೊರಲಿದ್ದಾನೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 750ಕೆ.ಜಿ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದು ಅಭಿಮನ್ಯುಗೆ ಇತರೇ ಆನೆಗಳು ಸಾಥ್ ನೀಡಲಿವೆ. ಕಳೆದ ಬಾರಿಯಂತೆ ಈ ಬಾರಿಯೂ ಸರಳ ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಲಿದೆ ಎನ್ನಲಾಗಿದೆ.

Key words: Workout -Mysore Dasara –captain-abhimanyu- 500 kg- weight