ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ದರೋಡೆ: 43 ಲಕ್ಷ ನಗದು ಮತ್ತು ಚಿನ್ನಾಭರಣ ದೋಚಿ ಖದೀಮರು ಎಸ್ಕೇಪ್.

Promotion

ಕೋಲಾರ,ಸೆಪ್ಟಂಬರ್,24,2022(www.justkannada.in): ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿದ ಖದೀಮರು ಮನೆಯಲ್ಲಿದ್ಧ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಸಂಪಂಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮಂಜುನಾಥ್ ಎಂಬುವವರ ಮನೆಯಲ್ಲಿ ದರೋಡೆಕೋರರು 43 ಲಕ್ಷ ನಗದು ಮತ್ತು 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮಂಜುನಾಥ್ ಅವರು ಜಮೀನು ಮಾರಾಟ ಮಾಡಿ 43 ಲಕ್ಷ ರೂ ಹಣವನ್ನ ಮನೆಯಲ್ಲಿಟ್ಟಿದ್ದರು. ಈ ನಡುವೆ ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದ ಖದೀಮರು ಮನೆಯಲ್ಲಿದ್ಧ ಮಂಜುನಾಥ್ ಅವರ ಪತ್ನಿ ಮಮತಾ ಅವರಿಗೆ  ಮತ್ತು ಬರುವ ಸ್ಪ್ರೈ ಮಾಡಿ ಹಣ ಹಣ ಮತ್ತು ಚಿನ್ನಾಭರಣವನ್ನ ದೋಚಿದ್ದಾರೆ.  ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Key words: Robbery – 43 lakhs – cash -gold -kolar