ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಗುಂಡೇಟು.

Promotion

ಬೆಂಗಳೂರು,ನವೆಂಬರ್,23,2022(www.justkannada.in):  ಪೊಲೀಸರ ಮೇಲೆಯೇ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ  ದರೋಡೆಕೋರನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ನೆಲಮಂಗಲದ ದಾನೋಜಿಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ನೆಲಮಂಗಲದ ದರೋಡೆಕೋರ ಯೋಗಾನಂದ ಅಲಿಯಾಸ್ ನೈಟ್​ಶಿಫ್ಟ್​ ಯೋಗಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ಮಾಡುವ ವೇಳೆ ಆರೋಪಿಯ ಯೋಗಾನಂದ ಪೊಲೀಸರ ಮೇಲೆ  ಇಟ್ಟಿಗೆಯಿಂದ ಹಲ್ಲೆ ನಡೆಸಲು ಮುಂದಾಗಿದ್ಧ.

ಈ ವೇಳೆ ಯೋಗಾನಂದ ಕಾಲಿಗೆ  ಪೊಲೀಸರು ಗುಂಡು ಹಾರಿಸಿದರು  ಈ ಸಮಯದಲ್ಲಿ ಕಾನ್ಸ್‌ ಟೆಬಲ್ ಹನುಮಂತ ಹಿಪ್ಪರಗಿ ಅವರ ಕೈಗಳಿಗೆ ಗಾಯವಾಗಿದೆ. ನೆಲಮಂಗಲ ಟೌನ್ ಪೊಲೀಸ್ ಇನ್ಸ್ ಪೆಕ್ಟರ್ ಶಶಿಧರ್‌ ರಿಂದ ಗುಂಡು ಹಾರಿಸಿ ಬಂಧಿಸಿದರು. ಆರೋಪಿಯ ಮೇಲೆ 18 ಪ್ರಕರಣಗಳಿವೆ.

Key words: robber -attacked -police – escape -shot – leg.