ಬಿಬಿಎಂಪಿ ಚುನಾವಣೆ ನಡೆಸಲು ಹಿಂದೇಟು:  ಮತ್ತೆ 3 ತಿಂಗಳು ಕಾಲಾವಕಾಶ ಕೇಳಿದ ಸರ್ಕಾರ.

ಬೆಂಗಳೂರು,ನವೆಂಬರ್,23,2022(www.justkannada.in):   ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದ್ದು ಈ ಮಧ್ಯೆ ಮತ್ತೆ 3 ತಿಂಗಳು ಕಾಲಾವಕಾಶ ಕೇಳಿದೆ.

ಈ ಸಂಬಂಧ ಹೈಕೋರ್ಟ್ ಗೆ ನಗರಾಭಿವೃದ್ಧಿ ಇಲಾಖೆ ಅರ್ಜಿ ಸಲ್ಲಿಸಿದ್ದು ಬಿಬಿಎಂಪಿ ಚುನಾವಣೆ ನಡೆಸಲು 3 ತಿಂಗಳು ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.

ನ್ಯಾ. ಭಕ್ತವತ್ಸಲ ಸಮಿತಿಯಿಂದ ಮಾಹಿತಿ ಕೇಳಲಾಗಿದೆ. ಹಿಂದುಳಿದ ವರ್ಗಕ್ಕೆ ಮೀಸಲಾತಿ ಸಂಬಂಧ, ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೋ ಮಾಹಿತಿ ಕೇಳಲಾಗಿದೆ . ಮಾಹಿತಿ ನೀಡಲು ಭಕ್ತ ವತ್ಸಲ ಸಮಿತಿ ಕಾಲಾವಕಾಶ ಕೇಳಿದೆ. ಹೀಗಾಗಿ 3 ತಿಂಗಳು  ಸಮಯ ನೀಡುವಂತೆ  ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮನವಿ ಮಾಡಿದೆ ಎನ್ನಲಾಗಿದೆ.  ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಲು ಹೈಕೋರ್ಟ್ ಆದೇಶಿಸಿತ್ತು.

Key  words: BBMP – hold –elections-government – another- 3 months.