ರಸ್ತೆ, ಚರಂಡಿ ಸಣ್ಣಪುಟ್ಟ ವಿಷಯವೇ..? ಹಾಗಾದ್ರೆ ಕೇರಿಯಲ್ಲಿ ಬದುಕುವವರ ಕಥೆ ಏನು..? – ಕಟೀಲ್ ವಿರುದ್ಧ ಹೆಚ್.ವಿಶ್ವನಾಥ್ ಕಿಡಿ.

Promotion

ಬೆಂಗಳೂರು,ಜನವರಿ,4,2023(www.justkannada.in): ರಸ್ತೆ, ಚರಂಡಿ ಸಣ್ಣ ಸಣ್ಣ ವಿಚಾರ ಬಿಟ್ಟುಬಿಡಿ . ಲವ್ ಜಿಹಾದ್ ಬಗ್ಗೆ ಗಮನ ನೀಡಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್,  ರಸ್ತೆ, ಚರಂಡಿ ಸಣ್ಣಪುಟ್ಟ ವಿಷಯವೇ…? ಹಾಗಾದರೇ ಕೇರಿಯಲ್ಲಿ ಬದುಕುವವನ ಕಥ ಏನು..?  ಕೇರಿಯಲ್ಲಿ ಬದುಕುವ ನಮಗೆ ಸೌಕರ್ಯ ಮುಖ್ಯ. ಜನರನ್ನ ತಪ್ಪು ದಾರಿಗೆ ಎಳೆಯುತ್ತಿದ್ದೀರಿ ನೋಡಿ.  ಆಡಳಿತ ಪಕ್ಷದವರು ಅರ್ಥವಿಲ್ಲದೇ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಬೊಮ್ಮಾಯಿ ಮೋದಿ ಬಳಿ ನಾಯಿಮರಿಯಂತೆ ಇರ್ತಾರೆ ಎಂದಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಕುಟುಕಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಕೂಡ ಸಿಎಂ ಆಗಿದ್ದರು ಯಾರೇ ಆಗಲಿ ಲಘುವಾಗಿ ಮಾತನಾಡಬಾರದು ಎಂದರು.

Key words: Road -drainage -small matter-  H. Vishwanath-Nalin kumar katil