ಹೊಸ ವರ್ಷದಲ್ಲಿ ಹೊಸ ಅತಿಥಿ ನಿರೀಕ್ಷೆಯಲ್ಲಿ ರಿಷಬ್ ಶೆಟ್ಟಿ ದಂಪತಿ!

Promotion

ಬೆಂಗಳೂರು, ಜನವರಿ 01, 2022 (www.justkannada.in): ಹೊಸ ವರ್ಷದಲ್ಲಿ ಹೊಸ ಅತಿಥಿ ಆಗಮನದ ನಿರೀಕ್ಷೆಯಲ್ಲಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ.

ಹೌದು. ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ-ಪ್ರಗತಿ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಪ್ರಗತಿ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ಸಂತೋಷದ ವಿಚಾರವನ್ನು ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ವರ್ಷಕ್ಕೆ ಸಂತಸವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ. ರಣ್ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಆಶೀರ್ವಾದವಿರಲಿ’ ಎಂದು ರಿಷಬ್ ಬರೆದುಕೊಂಡಿದ್ದಾರೆ. ರಿಷಬ್-ಪ್ರಗತಿ ದಂಪತಿಗೆ ಈಗಾಗಲೇ ರಣ್ವಿತ್ ಹೆಸರಿನ ಓರ್ವ ಪುತ್ರನಿದ್ದಾನೆ.