ಮಾಲಾಶ್ರೀ ಕುಟುಂಬಕ್ಕೆ ಬೆಂಬಲ ನೀಡಲು ಒಂದಾದ ಯಶ್-ದರ್ಶನ್ !

ಬೆಂಗಳೂರು, ಜನವರಿ 01, 2022 (www.justkannada.in): ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿ ಮಾಲಾಶ್ರೀ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಹೌದು. ಕೋಟಿ ರಾಮು ನಿರ್ಮಾಣದ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಅರ್ಜುನ್ ಗೌಡ ಸಿನಿಮಾಗೆ ಶುಭ ಕೋರುವ ಮೂಲಕ ಮಾಲಾಶ್ರೀ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ ಈ ಜೋಡೆತ್ತುಗಳು.

ಈ ಹಿಂದೆ ಪ್ರಿ ರಿಲೀಸ್ ಈವೆಂಟ್ ನಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಚಿತ್ರರಂಗದ ದಿಗ್ಗಜರು ಭಾಗಿಯಾಗಿದ್ದರು,

ಇದೀಗ ಯಶ್ ಮತ್ತು ದರ್ಶನ್ ಚಿತ್ರಕ್ಕೆ ಶುಭ ಕೋರುವ ಮೂಲಕ ನಟಿ ಮಾಲಾಶ್ರೀ ಅವರಿಗೆ ಸಾಥ್ ನೀಡಿದ್ದಾರೆ. ಅಂದಹಾಗೆ  ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಅರ್ಜುನ್ ಗೌಡ ಸಿನಿಮಾ ರಿಲೀಸ್ ಆಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ಪಡೆದಿದೆ.