ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ: ಸರ್ಕಾರದ ವಿರುದ್ಧ ಯು.ಟಿ ಖಾದರ್ ಆಕ್ರೋಶ.

Promotion

ಬೆಂಗಳೂರು,ಮಾರ್ಚ್,23,2022(www.justkannada.in):  ಹಿಜಾಬ್ ಕುರಿತ ತೀರ್ಪು ವಿರೋಧಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದ ಹಿನ್ನೆಲೆ ಇದೀಗ ಹಿಂದೂ ಜಾತ್ರೆ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.  ಕರಾವಳಿ, ಮಲೆನಾಡು ಭಾಗಗಳಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವರ್ತರಿಗೆ ವ್ಯಾಪಾರಕ್ಕೆ ಅವಕಾಶ ನೀಡದೆ ನಿರ್ಬಂಧ ವಿಧಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ.

ಇಂತಹ ಬೆಳವಣಿಗೆ ಬಗ್ಗೆ ಬಿಜೆಪಿ ಸರ್ಕಾರ ಮೌನವಹಿಸಿದೆ. ಸಮಾಜದ್ರೋಹಿ ಕೃತ್ಯವನ್ನ ಸರ್ಕಾರ ಆನಂದಿಸುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ಕೃತ್ಯಕ್ಕೆ ಸರ್ಕಾರ ಕುಮ್ಮಕ್ಕು  ನೀಡುತ್ತಿದೆ ಎಂದು ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇದು ಸರಿಯಲ್ಲ ವ್ಯಾಪಾರಕ್ಕೆ ಅವಕಾಶ ಕೊಡಬೇಕು. ಯಾರು ತೊಂದರೆ ಕೊಡುವ ಕೆಲಸ ಮಾಡಬಾರದು. ಚರ್ಚ್, ಮಸೀದಿ ಮುಂದೆ ಹಿಂದೂಗಳಿಗೆ ಅವಕಾಶ ನೀಡಿದಿದ್ರೆ ಏನಾಗುತ್ತೆ..? ಎಂದು ಹೇಳಿದರು.

Key words: Restrictions -Muslim -traders –fairs-UT Khader