ಶಾಸಕರ ವಿಚಾರಣೆ ನಡೆಸದೆ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ- ಸುಪ್ರೀಂಕೋರ್ಟ್ ನಲ್ಲಿ ಸ್ಪೀಕರ್ ಪರ ವಕೀಲರಿಂದ ವಾದ….

ನವದೆಹಲಿ,ಜು,16,2019(www.justkannada.in):  ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದ್ದು ರಾಜೀನಾಮೆ ಅರ್ಜಿ ವಿಚಾರಣೆ ಪ್ರಕ್ರಿಯೆ ಒಂದು ರಾತ್ರಿಯಲ್ಲಿ ಮುಗಿಸಲು ಸಾಧ್ಯವಿಲ್ಲ. ಕಲಂ 109 ರಂತೆ ಶಾಸಕರ ವಿಚಾರಣೆ ನಡೆಸದೆ ಅಂಗೀಕಾರ ಸಾಧ್ಯವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತಿಳಿಸಿದರು.

ಸುಪ್ರೀಂಕೋರ್ಟ್ ನ ಸಿಜೆ ರಂಜನ್ ಗೋಗಯ್ ನೇತೃತ್ವದಲ್ಲಿ ಸ್ಪೀಕರ್ ವಿರುದ್ದ  ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ವೇಳೆ  ಸ್ಪೀಕರ್ ಪರ ವಾದ ಮಂಡಿಸುತ್ತಿರುವ ವಕೀಲ ಅಭೀಷೇಕ್ ಮನು ಸಿಂಘ್ವಿ ಅವರು,  ಕಲಂ 109 ರಂತೆ ಶಾಸಕರ ವಿಚಾರಣೆ ನಡೆಸದೆ ಅಂಗೀಕಾರ ಸಾಧ್ಯವಿಲ್ಲ.ಶಾಸಕರು ಸ್ಪೀಕರ್ ಬಳಿ ಸಮಯವನ್ನೇ ಕೇಳಿರಲಿಲ್ಲ. ಹಾಗಾಗಿ ಅನರ್ಹತೆ ಅರ್ಜಿ ಮೊದಲು ಪರಿಗಣನೆಯಾಗಲಿ. ಅದನ್ನೇ ಸ್ಪೀಕರ್ ಆರಂಬಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿದರು.

ಈ ವೇಳೆ ಸುಪ್ರೀಂ ನಿರ್ದೇಶನದ ಬಳಿಕವೂ ಸ್ಪೀಕರ್ ಏಕೆ ಕ್ರಮ ಜರುಗಿಸಿಲ್ಲ ಎಂದು ನ್ಯಾ.ದೀಪಕ್ ಗುಪ್ತಾ ಪ್ರಶ್ನೆ ಮಾಡಿದರು. ತಮ್ಮ ಇಷ್ಟದ ಪ್ರಕಾರ ತೀರ್ಮಾನ ಅನ್ನುವುದು ಸರಿಯಲ್ಲ ಎಂದು ಸ್ಪೀಕರ್ ಕ್ರಮಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಸ್ಪೀಕರ್ ಲಭ್ಯರಿಲ್ಲದ ಕಾರಣಕ್ಕೆ ಕೋರ್ಟ್ ಗೆ ಬಂದಿದ್ದೇನೆ ಎಂಬುದು ಶಾಸಕರ ಮಾತು ಎಂದು ಸಿಂಘ್ವಿ ಅವರಿಗೆ  ಸಿಜೆ ಪ್ರಶ್ನೆ ಹಾಕಿದರು. ಹಾಗೆಯೇ. ರಾಜೀನಾಮೆ ಕೊಟ್ಟು ಅನರ್ಹತೆ ಯಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ? ಶೆಡ್ಯೂಲ್ 10 ಮತ್ತು ಕಲಂ 109 ಒಂದಕ್ಕೊಂದು ಪೂರಕವಾಗಿವೆಯೇ ಎಂದು ನ್ಯಾ.ಅನಿರುಧ್ ಬೋಸ್  ಪ್ರಶ್ನಿಸಿದರು.

ಇದೇ ಸಮಯದಲ್ಲಿ ವಾದ ಮುಂದುವರೆಸಿದ ಅಭಿಷೇಕ್ ಮನು ಸಿಂಘ್ವಿ, ರಾಜೀನಾಮೆ ಅನರ್ಹತೆಯಿಂದ ಪಾರಾಗುವ ಮಾರ್ಗ ಆಗಬಾರದು. ಪಕ್ಷಾಂತರ ಕಾಯಿದೆ ಮಣಿಸುವುದು ರಾಜೀನಾಮೆ ಉದ್ದೇಶ. ಶಾಸಕರದ್ದು ಸಂವಿಧಾನ ವಿರುದ್ಧ ನಡೆ. ಇದು ಅನರ್ಹತೆ ಪ್ರಕರಣವೇ ಹೊರತು ರಾಜೀನಾಮೆಗೆ ಸಂಬಂಧಿಸಿದ್ದಲ್ಲ. ಶಾಸಕರು ಖುದ್ದು ಹಾಜರಾಗದೆ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ. ತ್ವರಿತವಾಗಿ ರಾಜೀನಾಮೆ ಅಂಗೀಕಾರ ಸರಿಯಾದ ಕ್ರಮ ಅಲ್ಲ ಎಂದರು.

Key words: Resignation -cannot – accepted -without – hearing – Arguments -advocate -speaker -Supreme Court.