ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್ ಗೆ ನಿರ್ದೇಶಿಸಲು ಸಾಧ್ಯವಿಲ್ಲ-ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ: ವಿಚಾರಣೆ 2 ಗಂಟೆಗೆ ಮುಂದೂಡಿಕೆ…

ನವದೆಹಲಿ,ಜು,16,2019(www.justkannada.in):  ಕಾಲಮಿತಿಯಲ್ಲಿ ಶಾಸಕರ ರಾಜೀನಾಮೆ ಅಂಗೀಕಾರ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್ ಗೆ ಸುಪ್ರೀಂಕೋರ್ಟ್ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಮಂಡಿಸಿದರು.

ಸುಪ್ರೀಂಕೋರ್ಟ್ ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ವೇಳೆ ಸ್ಪೀಕರ್ ಪರ ವಾದ ಮಂಡಿಸುತ್ತಿರುವ ಅಭಿಷೇಕ್ ಮನು ಸಿಂಘ್ವಿ, ಒಂದು ಸಾಂವಿಧಾನಿಕ ಸಂಸ್ಥೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಗೆ ನಿರ್ದೇಶಿಸಬಾರದು. ಸ್ಪೀಕರ್ ಕಚೇರಿಯೂ ಕೂಡ ನ್ಯಾಯಾಂಗವನ್ನ ಗೌರವಿಸುತ್ತೆ. ಸ್ಪೀಕರ್ ತುಂಬಾ ಅನುಭವಿ ಇದ್ದಾರೆ. ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅವರು ತಪ್ಪು ನಿರ್ಧಾರ ಕೈಗೊಂಡರೇ ನೀವು ಮಧ್ಯಪ್ರವೇಶಿಸಬಹುದು. ಹಾಗೆಯೇ ಯಥಾಸ್ಥಿತಿ ತೆರವುಗೊಳಿಸಿ  ಎಂದು ಮನವಿ ಮಾಡಿದರು.

ಇನ್ನು ನ್ಯಾಯಮೂರ್ತಿಗಳು ತಮ್ಮ ಛೇಂಬರ್ ಗೆ ತೆರಳಿದ್ದು ಸುಪ್ರೀಂಕೋರ್ಟ್ ಬೋಜನ ವಿರಾಮ ಹಿನ್ನೆಲೆ ವಿಚಾರಣೆಯನ್ನ 2 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.

Key words: speaker- cannot- direct – decision –Advocate- Abhishek Manu Singhvi -hearing – Adjournment