ಮೀಸಲಾತಿ ಮಹಾಮೋಸ: ಮೋದಿ ಮತ್ತು ಬೊಮ್ಮಾಯಿ ಕನ್ನಡಿಗರ ಕ್ಷಮೆ ಕೇಳಲಿ ಎಂದ ಮಲ್ಲಿಕಾರ್ಜುನ ಖರ್ಗೆ

Promotion

ಬೆಂಗಳೂರು, ಮೇ 10, 2023 (www.justkannada.in): ಮೀಸಲಾತಿ ಮಹಾ ಮೋಸಕ್ಕಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡಿಗರ ಕ್ಷಮೆ ಕೇಳಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಮೀಸಲಾತಿ ಯಥಾಸ್ಥಿತಿ ಯನ್ನು 2023ರ ಜುಲೈ 25ರವರೆಗೆ ವಿಸ್ತರಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಹೇಳುವ ಮೂಲಕ ಸರಕಾರದ ಮೀಸಲಾತಿ ವಂಚನೆ ಮತ್ತೊಮ್ಮೆ ಬಯಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್‌ ಮುಂದೆ ಸರಕಾರ ನೀಡಿರುವ ಹೇಳಿಕೆ ಪರಿಣಾಮ ಎಲ್ಲರೂ ಮೀಸಲಾತಿ ವಂಚನೆಗೆ ಒಳಗಾದಂತಾಗಿದೆ. ಯಾರೂ ಯಾವುದೇ ಮೀಸಲಾತಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಹಿಂದೆ ಇದ್ದಂತೆ ಲಿಂಗಾಯತರಿಗೆ 3ಬಿ, ಒಕ್ಕಲಿಗರಿಗೆ 3ಎ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕ್ರಮವಾಗಿ ಶೇ. 15 ಮತ್ತು ಶೇ. 3ಕ್ಕೆ ಸೀಮಿತಗೊಳ್ಳಲಿದೆ ಎಂದು ಹೇಳಿದ್ದಾರೆ.