ಮೀಸಲಾತಿ ವಿವಾದ, ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ : ವಿಪಕ್ಷನಾಯಕ ಸಿದ್ದರಾಮಯ್ಯ ಟೀಕೆ

Promotion

ಬೆಂಗಳೂರು,ಮಾರ್ಚ್,04,2021(www.justkannada.in) : ಈಗ ಎದ್ದಿರುವ ಮೀಸಲಾತಿ ವಿವಾದ ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ. ಇವರು ಹಚ್ಚಿರುವ ವಿವಾದದ ಬೆಂಕಿಗೆ ಇವರೇ ಸ್ವಯಂ ಬಲಿಯಾಗಲಿದ್ದಾರೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

 Reservation-Controversy-Sangh Parivar-Clandestine-effect-politics-Opposition-leader-Siddaramaiah 

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಒಪ್ಪಿ, ಅನುಷ್ಠಾನಗೊಳಿಸಲಿ

ಮೀಸಲಾತಿ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸುವ ಪ್ರಾಮಾಣಿಕ ಉದ್ದೇಶವನ್ನು ಸಿಎಂ ಬಿ.ಎಸ್.ವೈ ಹೊಂದಿದ್ದರೆ ಪೂರ್ಣಗೊಂಡು ಸಿದ್ದ ಇರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಅನುಷ್ಠಾನಗೊಳಿಸಲಿ ಎಂದರು.

ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗಗಳ ಬದಲಾವಣೆಯ ಬೇಡಿಕೆಯನ್ನು ಮೀಸಲಾತಿ ಹೆಚ್ಚಳದ ಮೂಲಕ ಮಾತ್ರ ಶಾಶ್ವತವಾಗಿ ಪರಿಹರಿಸಲು ಸಾಧ್ಯ. ತಕ್ಷಣ ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಒತ್ತಾಯಿಸಬೇಕು ಎಂದಿದ್ದಾರೆ.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುತಂತ್ರ

 Reservation-Controversy-Sangh Parivar-Clandestine-effect-politics-Opposition-leader-Siddaramaiah 

ಮೀಸಲಾತಿ ಬೇಡಿಕೆಗಳ ಪರಿಶೀಲನೆಗಾಗಿ ಉನ್ನತಾಧಿಕಾರದ ಸಮಿತಿ ರಚಿಸುವ ಸಿಎಂ ಬಿ.ಎಸ್.ವೈ. ನಿರ್ಧಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುತಂತ್ರ ಅಷ್ಟೆ. ಇದರಲ್ಲಿ ಲವಲೇಶದಷ್ಟು ಪ್ರಾಮಾಣಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

key words : Reservation-Controversy-Sangh Parivar-Clandestine-effect-politics-Opposition-leader-Siddaramaiah