ದಸರೆಯಲ್ಲಿ ಪಾಲ್ಗೊಳ್ಳಲು ಹೆಚ್ಚು ಜನರಿಗೆ ಅವಕಾಶ ನೀಡುವಂತೆ ಸಿಎಂಗೆ ಮನವಿ: ಸಚಿವ ಸೋಮಶೇಖರ್

Promotion

ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಸರಳ ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ 8ನೇ ತಾರೀಕಿನಂದು ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಈ ಬಾರಿಯೂ ಸರಳ ದಸರ ಆಚರಣೆಗೆ ಮಾಡುವಂತೆ ತೀರ್ಮಾನ ಮಾಡಲಾಗಿದೆ. ದಸರಾ ಗೆ 5 ಕೋಟಿ ಕೇಳಿದ್ದೆ. ಮೈಸೂರು ಚಾಮರಾಜನಗರ ಶ್ರೀರಂಗಪಟ್ಟಣ ಸೇರಿದಂತೆ ಸಿಎಂ 6 ಕೋಟಿ ನೀಡಿದ್ದಾರೆ. ಒಂದು ಕೋಟಿ ಹೆಚ್ವುವರಿಯಾಗಿ ಹಣ ನೀಡಿದ್ದಾರೆ. ಉದ್ಘಾಟಕರ ಆಯ್ಕೆಗೆ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದ್ದೇವೆ. ಸದ್ಯದಲ್ಲೆ ಉದ್ಘಾಟಕರು ಯಾರು ಅಂತ ಮಾಹಿತಿ ನೀಡುತ್ತಾರೆ ಎಂದು ಮಾಹಿತಿ ನೀಡಿದ್ಧಾರೆ.

ಯಾರೂ ಕೂಡ ಶಾರ್ಟ್ ಲೀಸ್ಟ್ ಕೊಟ್ಟಿಲ್ಲ. ಯಾರಾದರೂ ಶಾರ್ಟ್ ಲೀಸ್ಟ್ ನೀಡಿದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಕೋವಿಡ್ ಕಮ್ಮಿ ಇರುವಿದರಿಂದ ಹೆಚ್ಚು ಜನರ ಭಾಗವಹಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ. ಸೆಪ್ಟೆಂಬರ್ 20 ರ ಮೇಲೆ ಕೋವಿಡ್ ಮೂರನೆ ಅಲೆಯ ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಿದ್ದೇವೆ. ಜಂಬೂಸವಾರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ಯಾಲೆಸ್ ಒಳಗೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.

Request CM to allow more people to participate in dasara says minister somashekar