ಪಂಚಮಸಾಲಿಗೆ 2ಎ ಮೀಸಲಾತಿಗೆ ಆಗ್ರಹ: ಸ್ಪಷ್ಟನೆ ನೀಡದಿದ್ರೆ ಸದನದಲ್ಲೇ ಧರಣಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

Promotion

ಬೆಂಗಳೂರು,ಮಾರ್ಚ್,10,2021(www.justkannada.in):  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡದಿದ್ದರೇ ಸದನದಲ್ಲಿ  ಧರಣಿ  ನಡೆಸುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.jk

ವಿಧಾನಸಭೆ ಕಲಾಪದಲ್ಲಿ ಮೀಸಲಾತಿ ಬಗ್ಗೆ  ಪ್ರಸ್ತಾಪಿಸಿ  ಸಿಎಂ ಬಿಎಸ್ ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಿನ್ನೆ ಸಿಎಂ ಮಾತನಾಡ್ತೇನೆ ಎಂದಿದ್ದರು. ಆದರೆ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ ಎಂದು ಕಿಡಿಕಾರಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬಗ್ಗೆ ಸಿಎಂ ಸ್ಪಷ್ಟನೆ ನೀಡದಿದ್ದರೇ, ನಾಳೆಯಿಂದ ಸದನದಲ್ಲೇ ಧರಣಿ  ನಡೆಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

request-2a-reservation-panchamasali-clarified-mla-basanagowda-patil-yatnal
ಕೃಪೆ-internet

 ಈಗಾಗಲೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಸಮುದಾಯದ ಸ್ವಾಮೀಗಳು, ಮುಖಂಡರು ಪಾದಯಾತ್ರೆ ನಡೆಸಿ, ಬೃಹತ್ ಸಮಾವೇಶದಲ್ಲೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.

Key words: Request -2A- reservation –Panchamasali- clarified-MLA-Basanagowda Patil Yatnal.