NEP-2020 ಅನುಷ್ಠಾನಕ್ಕೆ ಶಿಕ್ಷಕರು, ಆಡಳಿತ ವರ್ಗ, ಸರ್ಕಾರದ ಪಾತ್ರ ಪ್ರಮುಖ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮಾರ್ಚ್,2021(www.justkannada.in) : ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಶಿಕ್ಷಕರು, ಆಡಳಿತ ವರ್ಗ ಹಾಗೂ ಸರ್ಕಾರದ ಪಾತ್ರ ಪ್ರಮುಖ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಉತ್ತಮ ಸಹಕಾರ ನೀಡಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jkಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ 2020- ಭವಿಷ್ಯ‌ ಮತ್ತು ಮುಂದಿನ ದಾರಿ” ವಿಷಯ ಕುರಿತ‌ ಒಂದು ದಿನದ ಕಾರ್ಯಾಗಾರವನ್ನು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿ ಮಾತನಾಡಿದರು.

ಬಜೆಟ್ ನಲ್ಲಿ ಉನ್ನತ ಶಿಕ್ಷಣಕ್ಕೆ ನಿರಾಶದಾಯಕ

ಈ ಬಾರಿಯ ಬಜೆಟ್ ನಲ್ಲಿ ಉನ್ನತ ಶಿಕ್ಷಣಕ್ಕೆ ನಿರಾಶದಾಯಕವಾಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕೆ ಶಿಕ್ಷಕರ ನೇಮಕವು ಅಗತ್ಯ. ಸರ್ಕಾರ ಈ ಉದ್ದೇಶದಿಂದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿತ್ತು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕಾರ್ಯೋನ್ಮುಖರಾಗಬೇಕು 

ಶಿಕ್ಷಕರು ಹಾಗೂ ಆಡಳಿತ ವರ್ಗ ಭರವಸೆಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉತ್ತಮವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧಿಸಿದಂತೆ ಹಲವು ಕಾರ್ಯಕ್ರಮ ನಡೆಸಲಾಗಿದೆ. ಇದೀಗ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಅಭಿವೃದ್ಧಿ ಹೊಂದಿದ ದೇಶಗಳ ಶಿಕ್ಷಣ ಮಾದರಿ

ಅಭಿವೃದ್ಧಿ ಹೊಂದಿದ ದೇಶಗಳ ಶಿಕ್ಷಣ ಮಾದರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದು, ಕಸ್ತೂರಿ ರಂಗನ್ ಸೇರಿದಂತೆ ಅನೇಕರ ಶ್ರಮದ ಫಲವಾಗಿದೆ. ಈ ನೀತಿಯನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕು ಎಂಬುದರ ಕುರಿತು ಚಿಂತಿಸಿ, ಅಳವಡಿಸಿಕೊಳ್ಳಬೇಕಿದೆ ಎಂದರು.

Role-Teachers-Governing-Government-Implementation-NEP-2020-Chancellor-Prof.G.Hemant Kumar

ಶೈಕ್ಷಣಿಕವಾಗಿ ವ್ಯವಸ್ಥೆ ಬದಲಾಗಲಿದೆ

ರಾಷ್ಟ್ರೀಯ ಶಿಕ್ಷಣ ನೀತಿಯು ಬಹಮುಖಿಯಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲಗಳ ಕಲಿಕೆಗೆ ಸಹಕಾರಿ. ಈ ಕಾರ್ಯವು ಒಂದು ದಿನದಲ್ಲಿ ನಡೆಯುದಿಲ್ಲ. ಶೈಕ್ಷಣಿಕವಾಗಿ ವ್ಯವಸ್ಥೆ ಬದಲಾಗಲಿದ್ದು, ಪದವಿ, ಸ್ನಾತಕೋತ್ತರ ಪದವಿಗಳ ಪಠ್ಯಕ್ರಮ ಬದಲಾಗಲಿದೆ. ಈ ಕುರಿತಂತೆ ಸರ್ಕಾರವೇ ಮಾದರಿ ಪಠ್ಯಕ್ರಮ ಸಿದ್ಧಪಡಿಸಲಿದೆ ಎಂದು ಮಾಹಿತಿ ನೀಡಿದರು.

ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ಅಗತ್ಯ

ಹಂತ,ಹಂತವಾಗಿ, ವರ್ಷದಿಂದ ವರ್ಷಕ್ಕೆ ಪ್ರವೇಶಾತಿಯ ಜೊತೆಗೆ ಕೋರ್ಸ್ ಗಳು ಜಾಸ್ತಿಯಾಗಬೇಕಿದೆ. ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಠಿಯತ್ತ ಗಮನಹರಿಸಬೇಕಿದೆ. ವಿದೇಶಗಳಲ್ಲಿರುವಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ, ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳುವವರಿಗೆ ಇಲ್ಲಿಯೇ ಅವಕಾಶ ಕಲ್ಪಿಸಿದಂತ್ತಾಗುತ್ತದೆ ಎಂದು ಸಲಹೆ ನೀಡಿದರು.

ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಯಾವ ರೀತಿಯ ಕೋರ್ಸ್ ಗಳು ಅಗತ್ಯ. ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವ ರೀತಿಯಲ್ಲಿ ಸಹಕಾರಿ ಎಂಬಿತ್ಯಾದಿಯಾಗಿ ಯೋಚಿಸಿ ಕೋರ್ಸ್ ಆರಂಭಿಸುವುದು ಬಹಳ ಮುಖ್ಯ. ಶಿಕ್ಷಣ ನೀತಿಯಲ್ಲಿ ಬದಲಾವಣೆಗೆ ಎಲ್ಲಾ ರೀತಿಯ ಅವಕಾಶವಿದ್ದು, ಕೋರ್ಸ್ ಗಳ ಅರಂಭಕ್ಕೆ ಸಂಬಂಧಿಸಿದಂತೆ ಕಮಿಟಿಗಳ ರಚಿಸಿಕೊಂಡು, ಬ್ಲೂ ಪ್ರಿಂಟ್ ಸಿದ್ಧಪಡಿಸಿಕೊಳ್ಳುವುದು ಉತ್ತಮ ಎಂದರು.

ಮೈಸೂರು ವಿವಿಯ 12 ವಿಭಾಗಗಳಲ್ಲಿ ಈ ಪ್ರಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲವು ವಿಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೌಲ್ಯಮಾಪನ, ಪಠ್ಯ ಸೇರಿದಂತೆ ಹಲವು ವಿಭಾಗಗಳಿಂದ ಸಮಸ್ಯೆಗಳು ಕೇಳಿ ಬಂದಿವೆ ಎಂದು ಹೇಳಿದರು.

ವಿದ್ಯಾರ್ಥಿಗಳಂತೆ ಶಿಕ್ಷಕರು ನಿತ್ಯ ಸಿದ್ಧರಾಗಿ

ವಿದೇಶಗಳಲ್ಲಿರುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ, ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವವರಿಗೆ ಇಲ್ಲಿಯೇ ಅವಕಾಶ ಕಲ್ಪಿಸಿದಂತ್ತಾಗುತ್ತದೆ. ವಿದ್ಯಾರ್ಥಿಗಳಂತೆ ಶಿಕ್ಷಕರು ನಿತ್ಯ ಸಿದ್ಧರಾಗಿ ಹೊಸ ವಿಷಯಗಳನ್ನು ಕಲಿತು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯಮಾಡಬೇಕು ಎಂದು ತಿಳಿಸಿದರು.

Role-Teachers-Governing-Body-Government-Implementation-NEP-2020-Chancellor-Prof.G.Hemant Kumar

ರಾಷ್ಟ್ರೀಯ ಶಿಕ್ಷಣ ನೀತಿಯು ಸಮಗ್ರ ಅಧ್ಯಯನ

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ಸಮಗ್ರ ಅಧ್ಯಯನವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಕೌಶಲಗಳನ್ನು ಕಲಿಯುವುದಕ್ಕೆ ಸಹಕಾರಿಯಾಗಿದೆ. ಶೈಕ್ಷಣಿಕ ಕ್ಷೇತ್ರದ ಪನರ್ ನಿರ್ಮಾಣವಾಗಿದ್ದು, ಶಿಕ್ಷಕರು, ಆಡಳಿತ ವರ್ಗ ಹಾಗೂ ಸರ್ಕಾರದ ಶ್ರಮದಿಂದ ಉತ್ತಮ ಫಲಿತಾಂಶ ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ವಾಣಿಜ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಪ್ರೊ.ಯಶವಂತ ಡೋಂಗ್ರೆ, ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನಗಳ ನಿರ್ದೇಶಕ. ಡಾ.ಬಿ.ಎಸ್‌.ಪದ್ಮಾವತಿ, ಪ್ರೊ.ಜನಾರ್ಧನ್, ಪ್ರೊ.ಎನ್.ಲೋಕನಾಥ್ ಉಪಸ್ಥಿತರಿದ್ದರು.

ENGLISH SUMMARY…..

Role of teachers, administration and government important in implementation of NEP-2020: Prof. G. Hemanth Kumar
Mysuru, Mar. 2021 (www.justkannada.in): “The role of teachers, administration, and the government will be very important in the implementation of the National Education Policy – 2020. The State and the Central Governments should provide good cooperation for this,” opined Prof. G. Hemanth Kumar, Vice-Chancellor, University of Mysore.
He inaugurated a one-day workshop on the topic ‘National Education Policy 2020-Future and Way Forward,’ organized by the University of Mysore, at the Vignana Bhavana today.
In his address, he mentioned that the State Budget has caused disappointment because of no allocation for the higher education sector. “Appointment of teachers is very important to improve the quality of education. The government should have given more stress to this,” he said.
“Teaches and the administration should strive for correct implementation of the National Educational Policy. Several programs have already been held in this regard. Now we should get ready for its implementation,” he added.Role-Teachers-Governing-Body-Government-Implementation-NEP-2020-Chancellor-Prof.G.Hemant Kumar
On the occasion, he mentioned that the National Education Policy 2020 will be a model for other developing countries in the world as it has been developed based on the education model in developed countries, as a result of the efforts of Kasturi Rangan and other experts. We have to think about how to implement it effectively and adopt it,” he observed.
Keywords: Prof. G. Hemanth Kumar/ National Education Policy – 2020/ University of Mysore/ National Education Policy 2020-Future and Way Forward

key words : Role-Teachers-Governing-Government-Implementation-NEP-2020-Chancellor-Prof.G.Hemant Kumar