ಮುಂದಿನ ಬಜೆಟ್ ನಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳ ಮರುನಿರ್ಮಾಣಕ್ಕೆ ಆದ್ಯತೆ –ಡಿಸಿಎಂ ಗೋವಿಂದ ಎಂ ಕಾರಜೋಳ ಹೇಳಿಕೆ…

ಬೆಂಗಳೂರು. ಡಿ.31,2019(www.justkannada.in):  ಲೋಕೋಪಯೋಗಿ ಇಲಾಖೆಯು 2020-21 ನೇ ಸಾಲಿನ ಬಜೆಟ್ ನಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಮರುನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಧಾನಸೌಧದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಇ ಪ್ರೊಕ್ಯೂರ್‍ಮೆಂಟ್‍ನಿಂದಾಗಿ ಕೆಲವು ಟೆಂಡರ್ ಪ್ರಕ್ರಿಯೆಗೆ ತಾಂತ್ರಿಕವಾಗಿ ವಿಳಂಭವಾಗಿದೆ. ಈ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು.  ಈ ಆಯವ್ಯಯದಲ್ಲಿ  ಈ ಕಾಮಗಾರಿಗಳಿಗೆ ಮರುನಿರ್ಮಾಣ ಮಾಡಲಾಗುವುದು. ಫಾಸ್ಟ್ರ್ಯಾಕ್ ನಲ್ಲಿ  ಸಂಭವಿಸುತ್ತಿರುವ  ಕೆಲವು ನ್ಯೂನತೆಗಳ ಕುರಿತು ಕೇಂದ್ರ ಭೂಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 94 ಅಪಘಾತ ಸ್ಥಳಗಳೆಂದು ಗುರುತಿಸಿದ್ದು, ಈ ಸ್ಥಳಗಳನ್ನು ಬ್ಲಾಕ್‍ಸ್ಪಾಟ್ ಎಂದು ಗುರುತಿಸಲಾಗಿದೆ. ಲೋಕೋಪಯೋಗಿ ಇಲಾಖೆಯ 249, ಕೆಶಿಪ್ ನ 20, ರಸ್ತೆ ಸಾರಿಗೆ ನಿಗಮದ 2, ರಾಷ್ಟ್ರೀಯ ಹೆದ್ದಾರಿಯ 172, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 392, ರಾಷ್ಟ್ರೀಯ ಹೆದ್ದಾರಿಹಾಗು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 69,  ಬಿಬಿಎಂಪಿಯ 31, ಬೆಳಗಾವಿಯ ಮಹಾನಗರ ಪಾಲಿಕೆಯ 2, ತುಮಕೂರು ಮಹಾನಗರ ಪಾಲಿಕೆಯ 3 ಸ್ಥಳಗಳೆಂದು ಗುರುತಿಸಲಾಗಿದೆ. ಈ ಅಪಘಾತ ಸ್ಥಳಗಳಲ್ಲಿ ರಸ್ತೆಯ ಜಾಗವನ್ನು ವಿಸ್ತರಿಸಿ, ಅಪಘಾತ ತಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Key words: Repair-flood-damaged roads – next budget-DCM Govinda M Karajola