ಖ್ಯಾತ ಮೇಕಪ್ ಆರ್ಟಿಸ್ಟ್ ‘ಮೇಕಪ್ ಕೃಷ್ಣ’ ನಿಧನ

Promotion

ಬೆಂಗಳೂರು, ಜನವರಿ 13, 2019 (www.justkannada.in): ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಖ್ಯಾತ ನಟರಿಗೆ ಮೇರು ನಟರಿಗೆ ಬಣ್ಣ ಹಚ್ಚಿದ ಕಲಾವಿದ ಮೇಕಪ್ ಕೃಷ್ಣ (56) ನಿಧನರಾಗಿದ್ದಾರೆ.

ಸೋಮವಾರರ ಬೆಳಗ್ಗೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕೃಷ್ಣ ವಿಧಿವಶರಾಗಿದ್ದಾರೆ. ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಮೇಕಪ್ ಕೃಷ್ಣ ಅವರು, ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ ಕುಂಬಳಗೋಡು ಬಳಿಯ ಗೊಲ್ಲಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಮೇಕಪ್ ನಲ್ಲಿ ದೊಡ್ಡ ಹೆಸರು ಮಾಡಿದ ಕೃಷ್ಣ ನಂತರ ಒಂದೊಂದೆ ಹೆಜ್ಜೆ ಮುಂದೆ ಹೋದರು. ಟಿವಿ ಕ್ಷೇತ್ರದಲ್ಲಿ ಹೆಸರು ಮಾಡಿದರು. ರಾಜ್ ಕುಮಾರ್ ಜೀವನವನ್ನು ಮೊದಲು ದೂರದರ್ಶನದಲ್ಲಿ ಪ್ರಸಾರ ಮಾಡಿದ ಖ್ಯಾತಿ ಇವರಿಗೆ ಇದೆ.