ಜನಗಣತಿ ಸಮೀಕ್ಷೆಯನ್ನ ಬಿಡುಗಡೆ ಮಾಡಿ-ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಎಂ ರೇವಣ್ಣ ಆಗ್ರಹ…

Promotion

ಬೆಂಗಳೂರು,ಅಕ್ಟೋಬರ್,16,2020(www.justkannada.in): ಸರ್ಕಾರ ಜಾತಿ ಗಣತಿ ವರದಿಯನ್ನ ಸರ್ಕಾರ ಅಂಗೀಕರಿಸಬೇಕು ಎಂದು ಮಾಜಿ ಸಚಿವ ಹೆಚ್.ಎಂ ರೇವಣ್ಣ ಆಗ್ರಹಿಸಿದರು.jk-logo-justkannada-logo

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಿಂದುಳಿದ ಜಾತಿ ಒಕ್ಕೂಟದ ಮುಖಂಡರ ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಜನಗಣತಿ ಸಮೀಕ್ಷೆಯನ್ನ ಬಿಡುಗಡೆ ಮಾಡಬೇಕು. ಇಲ್ಲಿಯವರೆಗೆ ಯಾವ ರಾಜ್ಯದಲ್ಲೂ ಜನಗಣತಿ ನಡೆದಿಲ್ಲ. 10 ವರ್ಷಕ್ಕೊಮ್ಮೆ ರ್ಯಾಂಡಂ ಸರ್ವೆ ನಡೆಯುತ್ತಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಈ ಜನಗಣತಿ ನಡೆದಿದೆ. ಸಾಮಾಜಿಕ, ಶೈಕ್ಷಣಿಕ ಗಣತಿ ನಡೆದಿದೆ. ಇದಕ್ಕೆ 126 ಕೋಟಿ ರೂಗಳನ್ನ ಇಲ್ಲಿ ಖರ್ಚು ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಸರ್ವೆ ನಡೆದಿದೆ. ಸಿದ್ದು ಅವಧಿಯ ಕೊನೆಯಲ್ಲಿ ಇನ್ನೂ ಅಂತಿಮ ಹಂತದಲ್ಲಿತ್ತು. ತಯಾರಾದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿಲ್ಲ. ಆದರೆ ಇದೀಗ ವರದಿಯನ್ನ ಆಯೋಗ ಸಲ್ಲಿಸಿದೆ. ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸಲ್ಲಿಸಿದೆ. ಸರ್ಕಾರ ಕೂಡಲೇ ವರದಿಯನ್ನ ಒಪ್ಪಿಕೊಳ್ಳಬೇಕು. ನಾವು ಇಲ್ಲಿ ರಾಜಕೀಯ ತರುವುದಿಲ್ಲ. ಈ ವರದಿಯನ್ನ ಸರ್ಕಾರ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಜಾತಿಗಣತಿ ವರದಿ ಜಾರಿಗೆ ಆಗ್ರಹಿಸಿ ಇದೇ 18 ರಂದು ಸಭೆ…

ಈ ವರದಿ ಜಾರಿಗೆ ಆಗ್ರಹಿಸಿ ಇದೇ 18 ರಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಮುದಾಯದ ಶ್ರೀಗಳು. ಎಲ್ಲಾ ಒಬಿಸಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜಾತಿ ಸಮೀಕ್ಷೆ ವರದಿ ಜಾರಿಗೆ ನಿರ್ಧಾರ ಹೊರಬೀಳುತ್ತದೆ ಎಂದು ಹೆಚ್.ಎಂ ರೇವಣ್ಣ ತಿಳಿಸಿದರು.Release -Census Survey-Former minister- HM Revanna -demands -government

ಸುದ್ದಿಗೋಷ್ಠಿ ವೇಳೆ ಒಕ್ಕೂಟದ ಅಧ್ಯಕ್ಷರಾದ ಕೆ.ಎಂ.ರಾಮಚಣದ್ರಪ್ಪ, ಕಾರ್ಯಾಧ್ಯಕ್ಷರಾದ ಸುರೇಶ್ ಲಾತೂರ್  ಪ್ರದಾನ ಕಾರ್ಯದರ್ಶಿಗಳಾದ ಎಣ್ಣೆಗೆರೆ ವೆಂಕಚರಾಮಯ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.

Key words: Release -Census Survey-Former minister- HM Revanna -demands -government