ಶ್ರೀ ಎಂ ಅವರ ಆತ್ಮಚರಿತ್ರೆ ‘ಪಯಣ ನಿರಂತರ’ ಕನ್ನಡಕ್ಕೆ ಅನುವಾದ

ಮೈಸೂರು,ಅಕ್ಟೋಬರ್,16,2020(www.justkannada.in) : ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಲೇಖಕ ಶ್ರೀ ಎಂ ಅವರ ಆತ್ಮಚರಿತ್ರೆಯ ಎರಡನೆ ಭಾಗ ಪಯಣ ನಿರಂತರ ಇಂಗ್ಲೀಷ್ ಕೃತಿಯನ್ನು ಅಂಬಿಕಾ ಸುಬ್ರಹ್ಮಣ್ಯ ಮತ್ತು ಲೋಹಿತ್ ಆಚಾರ್ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.jk-logo-justkannada-logoಪುಸ್ತಕ ಕುರಿತು ಅನುವಾದಕಿ ಅಂಬಿಕಾ ಸುಬ್ರಹ್ಮಣ್ಯ ಇದು ಹಿಮಾಲಯ ಗುರುವಿನ ಗರಡಿಯಲ್ಲಿ ಪುಸ್ತಕದ ಮುಂದುವರೆದ ಭಾಗವಾಗಿದೆ. ಆಧುನಿಕ ವಿಜ್ಞಾನವು ಅನ್ವೇಷಿಸಲು ಹೆಣಗಾಡುತ್ತಿರುವ ವಿಷಯಗಳ ಒಳತಿರುಳನ್ನೇ ತೆರೆದಿಡುವಂತಹಾ ಪುಸ್ತಕವಾಗಿದೆ ಎಂದಿದ್ದಾರೆ.

‘ಆಧ್ಯಾತ್ಮಿಕ ಅನ್ವೇಷಕನ ಪ್ರತಿಯೊಂದು ಜನ್ಮವೂ ಆಧ್ಯಾತ್ಮಿಕ ಉನ್ನತಿಗಾಗಿಯೇ’Sri M's-autobiography-'Payana Sarthin'-translated- Kannadaಮೆದುಳಿನ ರಚನೆಯ ಕುರಿತಾಗಿ ವಿಜ್ಞಾನವು ಸಾವಿರಾರು ಯಶಸ್ವೀ ಸಂಶೋಧನೆಗಳನ್ನು ನಡೆಸಿರಬಹುದು. ಆದರೆ, ಮೆದುಳಿನಲ್ಲಿ ದಾಖಲಾಗಿರಬಹುದಾದ ಮಾನವನ ಜನ್ಮಾಂತರದ ಪಯಣದ ಕುರಿತು ವಿಜ್ಞಾನಕ್ಕೆ ಏನೇನೂ ತಿಳಿದಿಲ್ಲ. ನೀವು ‘ಪುನರ್ಜನ್ಮಗಳ ಬಗ್ಗೆ’ ಹಾಗೂ ಒಬ್ಬ ‘ಆಧ್ಯಾತ್ಮಿಕ ಅನ್ವೇಷಕನ ಪ್ರತಿಯೊಂದು ಜನ್ಮವೂ ಆಧ್ಯಾತ್ಮಿಕ ಉನ್ನತಿಗಾಗಿಯೇ’ ಎಂಬ ವಿಚಾರಗಳ ಬಗ್ಗೆ ಪುರಾವೆಯನ್ನು ಹುಡುಕುತ್ತಿರುವಿರಾದರೆ. ಪಯಣ ನಿರಂತರ ವು ಓದಲೇಬೇಕಾದ ಕೃತಿಯಾಗಿದೆ ಎಂದು ಹೇಳಿದ್ದಾರೆ.
ಒಬ್ಬ ಜ್ಞಾನೋದಯವಾದ ವ್ಯಕ್ತಿಯ ಹಿಂದಿನ ಅನೇಕ ಜನ್ಮಗಳು, ಅಂದರೆ ಕೃಷ್ಣನ ಯುಗದಿಂದ ಮೊದಲುಗೊಂಡು, ಹೆಣ ಸುಡುವವನಾಗಿ, ವೀರಯೋಧನಾಗಿ, ಮುಸಲ್ಮಾನ ಸ್ತ್ರೀಯಾಗಿ, ಶ್ರೀಮಂತ ವ್ಯಾಪಾರಿಯಾಗಿ, ಕಡೆಗೆ ವೇಶ್ಯೆಯೂ ಆಗಿ ಸವೆಸಿದ ಅದ್ಭುತ ಪಯಣದ ಅಧ್ಯಾಯಗಳು ಇಲ್ಲಿವೆ. ಈ ಎಲ್ಲ ಜನ್ಮಗಳೂ ಆಧ್ಯಾತ್ಮಿಕ ಉನ್ನತಿಗಾಗಿಯೇ ಎಂಬುದು ಈ ಆತ್ಮಚರಿತ್ರೆಯಲ್ಲಿ ಸ್ಪಷ್ಟವಾಗಿ ಅನಾವರಣಗೊಂಡಿದೆ.

ಪ್ರಾಮಾಣಿಕ ಅನ್ವೇಷಕ ಓದಲೇಬೇಕಾದ ಪುಸ್ತಕ

“ಜಗತ್ತು ಮಿಥ್ಯೆ” ಎಂಬ ವೇದಾಂತದ ಹೇಳಿಕೆಯನ್ನು ಎಳೆಎಳೆಯಾಗಿ ತೆರೆದಿಡುವ ಪರಿಯಂತೂ ಅದ್ಭುತವೆನಿಸುವುದು. ಅಷ್ಟೇ ಅಲ್ಲದೇ ‘ಯೋಗಿಗಳ ಅಸಾಮಾನ್ಯ ಸಾಮರ್ಥ್ಯ’, ‘ಆಸ್ಟ್ರಲ್ ಯಾನ’ ಮತ್ತು ‘ಭೌತಿಕ ಶರೀರದಿಂದ ಸೂಕ್ಷ್ಮಶರೀರವನ್ನು ಹೇಗೆ ಬೇರ್ಪಡಿಸಬಹುದೆಂಬ ಸರಳ ವಿಧಾನಗಳು ಹೇಳಲು ಒಂದೇ ಎರಡೇ? ಒಟ್ಟಿನಲ್ಲಿ ಒಬ್ಬ ಪ್ರಾಮಾಣಿಕ ಅನ್ವೇಷಕ ಓದಲೇಬೇಕಾದ ಪುಸ್ತಕವಾಗಿದೆ ಎಂದು ತಿಳಿಸಿದ್ದಾರೆ.

key words : Sri M’s-autobiography-‘Payana Sarthin’-translated- Kannada