ದಸರಾ ಏರ್ ಶೋಗೆ ರಿಹರ್ಸಲ್ ಇಂದು: ಬನ್ನಿ ಮಂಟಪ ಮೈದಾನಲ್ಲಿ ಸಕಲ ಸಿದ್ಧತೆ

Promotion

ಮೈಸೂರು, ಅಕ್ಟೋಬರ್ 22, 2023 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಸರಾ ಏರ್ ಶೋಗೆ ಇಂದು ರಿಹರ್ಸಲ್ ನಡೆಯಲಿದೆ.

ಬನ್ನಿ ಮಂಟಪ ಮೈದಾನ ಪೂರ್ವಕ್ಕೆ ಮುಖ ಮಾಡಿಕೊಂಡಿರುವುದರಿಂದ ಮಧ್ಯಾಹ್ನದ ನಂತರ ಶೋ ನಡೆಯಲಿದೆ. ಇಂದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ಸ್ಥಳದಲ್ಲಿ ಹಾಜರಿರಬೇಕು.

ಅಂದಹಾಗೆ 2019ರಲ್ಲಿ ಮೈಸೂರಿನಲ್ಲಿ ದಸರಾ ಅಂಗವಾಗಿ ಏರ್ ಶೋ ನಡೆದಿತ್ತು. ದರಿಂಗ್ ಪೆಟಲ್ ಡ್ರಾಪಿಂಗ್, ಯುದ್ಧ ವಿಮಾನಗಳಿಂದ ಭಾರತೀಯ ವಾಯು ಸೇನೆ ಯೋಧರು ಜಿಗಿದು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ಯಾರಾಚೂಟ್‌ಗಳ ಮೂಲಕ ಬಂದಿಳಿಯುವುದು, ಯುದ್ಧ ವಿಮಾನದಿಂದ ಯೋಧರು ಹಗ್ಗ ಹಿಡಿದುಕೊಂಡು ಕೆಳಗೆ ಇಳಿದು ಯುದ್ಧ ಮಾಡುವ ಪ್ರದರ್ಶನ ನಡೆದಿತ್ತು.

ಮೈಸೂರು ದಸರೆಯಲ್ಲಿ ಏರ್ ಶೋ ಆಯೋಜನೆಗೆ ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರವನ್ನು ಮುಂಚಿತವಾಗಿಯೇ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ಭಾರತೀಯ ವಾಯು ಸೇನೆಯಿಂದ ಏರ್ ಶೋ ನಡೆಸಲು ಅನುಮತಿ ನೀಡಿದ್ದರು.