‘’ನಿರಾಶ್ರಿತರಿಗೆ ಹೂದಿಕೆ ವಿತರಿಸಿ’’ ಹೊಸ ವರ್ಷಕ್ಕೆ ಸ್ವಾಗತ…!

Promotion

ಮೈಸೂರು,ಜನವರಿ,01,2020(www.justkannada.in) : ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ರಸ್ತೆ ಬದಿ ನಿರಾಶ್ರಿತರಿಗೆ ಹೂದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.jk-logo-justkannada-mysoreಗೌರಿಶಂಕರ ನಗರ ಹಾಗೂ ರಮಾಬಾಯಿ ನಗರ ಸುತ್ತಮುತ್ತ ಫುಟ್ಬಾತ್ ಹಾಗೂ ಲಾರಿ ಕೆಳಗಡೆ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಸ್ಥಳಕ್ಕೆ ತೆರಳಿ ಸುಮಾರು 50 ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.refugees-Distribute-bury-Welcome-New Year…ಅಭಿಯಾನಕ್ಕೆ ಬಿಜೆಪಿ ಹಿಂದುಳಿದ ವರ್ಗದ ಮೈಸೂರು ನಗರ ಅಧ್ಯಕ್ಷ ಜೋಗಿ ಮಂಜು ,ಕರುಣಾಮಯಿ ವಿಷ್ಣು ಅಭಿಮಾನಿ ಬಳಗ ಎಸ್.ಎನ್.ರಾಜೇಶ್, ದುರ್ಗಾ ಪ್ರಸಾದ್, ರಾಕೇಶ್ ಕುಂಚಿಟಿಗ, ಹರೀಶ್ ನಾಯ್ಡು, ದೀಪಕ್ ,ದುರ್ಗಾ ಪ್ರಸಾದ್ ಇತರರು ಕೈ ಜೋಡಿಸಿದ್ದಾರೆ.

key words : refugees-Distribute-bury-Welcome-New Year…