ಗಳಿಕೆಯಲ್ಲೂ ‘ಪೈಲ್ವಾನ್’ ಗಮ್ಮತ್ತು ಜೋರು !

Promotion

ಬೆಂಗಳೂರು, ಸೆಪ್ಟೆಂಬರ್ 14, 2019 (www.justkannada.in): ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ‘ಪೈಲ್ವಾನ್’ ಅಬ್ಬರ ಜೋರಾಗಿದೆ.

ಚಿತ್ರದ ಮೊದಲ ದಿನದ ಗಳಿಕೆಯ ಮೇಲೆ ಗಾಂಧಿನಗರ ಕಣ್ಣಿಟ್ಟಿದ್ದು, ಇದೀಗ ಕೇಳಿ ಬರುತ್ತಿರುವ ಸುದ್ದಿಯು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಬಹುಭಾಷಾ ಚಿತ್ರವು 3 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿದ್ದು, ಅದೇ ರೀತಿ ಕರ್ನಾಟಕದಲ್ಲೇ 400ಕ್ಕೂ ಅಧಿಕ ಪರದೆ ಮೇಲೆ ರಾರಾಜಿಸಿದೆ. ಕನ್ನಡದ ‘ಪೈಲ್ವಾನ್’ ಮೊದಲ ದಿನವೇ 10 ಕೋಟಿ ಕಮಾಯಿ ಮಾಡಿದೆ ಎಂದು ಹೇಳಲಾಗುತ್ತಿದೆ.