ಆರ್‌ಡಿಪಿಆರ್ ಇಲಾಖೆ ಇ-ಆಡಳಿತದ ವತಿಯಿಂದ ‘ ಕ್ಯಾಶ್ ಲೆಸ್ ಕಾರ್ಡ್ ‘ ನೀಡುವ ವಿಶೇಷ ಅಭಿಯಾನ : ಶಿಲ್ಪನಾಗ್

 

ಬೆಂಗಳೂರು, ಆ.16, 2021 : (www.justkannada.in news ) ಆರ್‌ಡಿಪಿಆರ್ ಇಲಾಖೆಯ ಇ-ಆಡಳಿತ, ಆರೋಗ್ಯ ಇಲಾಖೆ ಮತ್ತು ಡಿಪಿಎಆರ್ ಇಲಾಖೆಗಳ ಸಹಯೋಗದಲ್ಲಿ ಸ್ಥಳದಲ್ಲೇ ‘ ಕ್ಯಾಶ್ ಲೆಸ್ ‘ ಆರೋಗ್ಯ ಕಾರ್ಡ್ ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗಿರುವ ಸಂಭ್ರಮಾಚರಣೆ ಅಂಗವಾಗಿ ಸರಕಾರ, ರಾಜ್ಯದ ಬಡ ಜನರನ್ನು ಅನಾರೋಗ್ಯ ಸಂಕೋಲೆಯಿಂದ ಮುಕ್ತಗೊಳಿಸಲು ಈ ಹೊಸ ಅಭಿಯಾನ ಆರಂಭಿಸಿದೆ. ಅ.15 ರಿಂದಲೇ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಈ ಪೈಲೆಟ್ ಯೋಜನೆ ಜಾರಿಗೊಂಡಿದೆ.

ರಾಜ್ಯ ಸರಕಾರದ ಮಹತ್ವಕಾಂಕ್ಷೆಯಾ ಈ ‘ ಕ್ಯಾಶ್ ಲೆಸ್ ‘ ಆರೋಗ್ಯ ಕಾರ್ಡ್ ವಿತರಿಸುವ ಯೋಜನೆ ಕುರಿತು ಆರ್‌ಡಿಪಿಆರ್ ಇಲಾಖೆಯ ಇ- ಆಡಳಿತ ನಿರ್ದೇಶಕರಾದ ಶಿಲ್ಪಾನಾಗ್ ‘ಜಸ್ಟ್ ಕನ್ನಡ ‘ ಜತೆ ಮಾತನಾಡಿ ಹೇಳಿದಿಷ್ಟು..

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಇ-ಆಡಳಿತ ಇಲಾಖೆ ‘ ಆರೋಗ್ಯ ಮಾಸ’ ಎಂಬ ಹೆಸರಿನಲ್ಲಿ ಈ ವಿಶೇಷ ಅಭಿಯಾನ ಶುರು ಮಾಡಿದೆ. ಆರ್‌ಡಿಪಿಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಉಮಾ ಮಹಾದೇವನ್ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಕರ್ನಾಟಕ ಕಾರ್ಡ್‌ ನೀಡುವ ಮಾಸಚರಣೆ ನಡೆಯುತ್ತಿದೆ. ಆ ಮೂಲಕ ಬಡ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಕಾರ್ಡ್ ವಿತರಿಸಲಾಗುವುದು. ಈ ಕಾರ್ಡ್ ಎಲ್ಲ ರೀತಿಯ ಚಿಕಿತ್ಸೆಗಳಿಗೂ ನೆರವಾಗಲಿದೆ.

ಈ ಅಭಿಯಾನ, ಆ.15 ರಿಂದ ಸೆ.14 ರ ವರೆಗೂ ಫಲಾನುಭವಿಗಳಿಗೆ ಸ್ಥಳದಲ್ಲೇ ಕಾರ್ಡ್ ವಿತರಿಸುವ ವಿಶೇಷ ಕಾರ್ಯಕ್ರಮ. ಸುಮಾರು 1 ಕೋಟಿ ಫಲಾನುಭವಿಗಳಿಗೆ ಈ ‘ ಕ್ಯಾಶ್ ಲೆಸ್ ‘ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಕೋವಿಡ್ ಸಂಕಷ್ಟ ಮಾತ್ರವಲ್ಲದೆ , ಇತರೆ ಎಲ್ಲ ರೀತಿಯ ಅನಾರೋಗ್ಯ ಸಂದರ್ಭಗಳಲ್ಲೂ ಬಡವರಿಗೆ ಉಚಿತ ಚಿಕಿತ್ಸೆ ಲಭಿಸುವಂತಾಗಬೇಕು ಎಂಬುದು ಉದ್ದೇಶ.
ಕೋವಿಡ್ ಸಾವು, ನೋವಿನ ವೇಳೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ಕೊಡಿಸಲು ಮುಂದಾಗಿತ್ತು. ಈ ವೇಳೆ ಕೆಲ ಸಂದರ್ಭಗಳಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಚಿಕಿತ್ಸೆ ಕೊಡಿಸಲು ಹರಸಾಸಹ ಪಡುವಂತಾಗಿತ್ತು. ಪರಿಣಾಮ ಅನೇಕ ಬಡ ರೋಗಿಗಳು ಸಂಕಷ್ಠಕ್ಕೆ ಈಡಾಗುವಂತಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸರಕಾರ ಈಗ ಕೋವಿಡ್ ಮಾತ್ರವಲ್ಲದೆ ಇತರ ಅನಾರೋಗ್ಯಗಳ ಸಂಕಷ್ಟ ಕಾಲದಲ್ಲೂ ಉಚಿತ ಚಿಕಿತ್ಸೆ ಸಿಗುವಂತೆ ಮಾಡಿದೆ.

ಈಗಾಗಲೇ ರಾಜ್ಯದಲ್ಲಿ ಆಯೂಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ (AB-ARK) ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನೆ ಅನ್ವಯ ಫಲಾನುಭವಿಗಳಿಗೆ 5 ಲಕ್ಷ ರೂ. ವರೆಗೂ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ದೊರೆಯಲಿದೆ. ಇದರ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸರಕಾರ ಈಗ ‘ ಕ್ಯಾಶ್ ಲೆಸ್ ಕಾರ್ಡ್’ ಪರಿಚಯಿಸುತ್ತಿದೆ.

mysore-Vaccination -Testing Center- Increase- Awareness -clothing bags-Mysore city corporation Commissioner -Shilpanag

ಈ ಕಾರ್ಡ್‌ಗಳು ಎಲ್ಲಿ ಸಿಗುತ್ತದೆ:

ರಾಜ್ಯದಲ್ಲಿ 1.3 ಕೋಟಿ ಫಲಾನುಭವಿಗಳಿಗೆ ಮಾತ್ರ ಆರೋಗ್ಯ ಕರ್ನಾಟಕ ಕಾರ್ಡ್ ನೀಡಲಾಗಿದೆ. ಉಳಿದವರಿಗೂ ಕಾರ್ಡ್ ವಿತರಣೆ ಮಾಡುವ ಸಲುವಾಗಿ ಆರ್‌ಡಿಪಿಆರ್ ಇಲಾಖೆಯ ಇ-ಆಡಳಿತ, ಆರೋಗ್ಯ ಇಲಾಖೆ ಮತ್ತು ಡಿಪಿಎಆರ್ ಇಲಾಖೆಗಳ ಸಹಯೋಗದಲ್ಲಿ ಸ್ಥಳದಲ್ಲೇ ಆರೋಗ್ಯ ಕಾರ್ಡ್ ಸಿಗುವ ವ್ಯವಸ್ಥೆ ಮಾಡಲಾಗಿದೆ.

ಅ.15 ರಿಂದ ರಾಜ್ಯದ ನಾಲ್ಕು ಜಿಲ್ಲೆಗಳಾದ ಚಿಕ್ಕಮಗಳೂರು, ವಿಜಯಪುರ, ಬೀದರ್‌ ಹಾಗೂ ದಾವಣಗೆರೆಯಲ್ಲಿ ಸ್ಥಳದಲ್ಲೇ ಆರೋಗ್ಯ ಕಾರ್ಡ್ ಸಿಗುವ ವ್ಯವಸ್ಥೆ ಮಾಡಲಾಗಿದೆ. ಈ ನಾಲ್ಕು ಜಿಲ್ಲೆಗಳ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಸೇವಾ ಕೇಂದ್ರಗಳು ಹಾಗೂ ಇತರ ಸರಕಾರದ ಸೇವಾ ಕೇಂದ್ರಗಳಲ್ಲಿ ಕಾರ್ಡ್ ಸಿಗುತ್ತದೆ. ಫಲಾನುಭವಿಗಳು ತಮ್ಮ ಆಧಾರ್ ಮತ್ತು ರೇಷನ್ ಕಾರ್ಡ್ ಸಲ್ಲಿಸಿ ಆ ಮೂಲಕ ಮಾಹಿತಿ ದಾಖಲು ಮಾಡಬೇಕು, ನಂತರ ಫಲಾನುಭವಿಯ ಬೆರಳಚ್ಚು ಪಡೆದು ಸ್ಥಳದಲ್ಲೇ ಕಾರ್ಡ್ ವಿತರಿಸಲಾಗುತ್ತದೆ.
ಈ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿದ್ದು ನಂತರದ ದಿನಗಳಲ್ಲಿ ಈ ಯೋಜನೆಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ.

key words : RDPR-E-governance-Karnataka-health.card-ayushman.bharath-arogya.karnataka-shilpa.nag

ENGLISH SUMMARY…

Cashless Card’ campaign from E-Administration of RDPR: Shilpanag
Bengaluru, August 16, 2021 (www.justkannadain): The E-Administration branch of the Rural Development and Panchayat Raj Department, in association with the Health Department and DPAR, has introduced a ‘Cashless Health Card’ distribution campaign.
This campaign has been initiated in order to free the poor people from the clutches of diseases, as part of the 75th year Independence Day celebrations. Distribution of the cards has commenced from August 15th itself in four districts of the State on a pilot basis.
Speaking to ‘Justkannada,’ RDPR E-Administration Director Shilpanag informed that the RDPR has initiated this campaign under a special campaign titled ‘Arogya Maasa,’ (Health month). “Health Karnataka card distribution month is being observed under the guidance of the RDPR Principal Secretary Uma Mahadevan. Poor beneficiaries will be identified and cards will be distributed to them. They can avail treatment for any kind of disease using this card.”mysore-Vaccination -Testing Center- Increase- Awareness -clothing bags-Mysore city corporation Commissioner -Shilpanag
“We have an aim of distributing this ‘Cashless Card’ to 1 crore beneficiaries. A special program is being held from August 15 to September 14, where cards will be distributed to beneficiaries on the spot. The objective of this campaign is to ensure that the poor people will get treatment at all times, especially during this COVID-19 Pandemic period.”
The Health Karnataka cards will be given to 1.3 crore beneficiaries in the state. The RDPR Department is also working towards providing the cards to others at the earliest. Arrangements have been made to distribute these cards on the spot in four districts including Chikkamagaluru, Vijayapura, Bidar, and Davanagere from August 15. These cards will be distributed at the Bapuji Seva Kendra, Gram One Seva Kendra, and other government service centers. Beneficiaries can get the cards by producing Aadhar cards and ration cards, and giving biometric details.
Keywords: RDPR/ Shilpanag/ Cashless cards/ poor