ಇಂದು ಆರ್ಸಿಬಿ ವರ್ಸಸ್ ಪಂಜಾಬ್ ಕಿಂಗ್ಸ್ ಹೋರಾಟ

Promotion

ಬೆಂಗಳೂರು, ಏಪ್ರಿಲ್ 30, 2021 (www.justkannada.in): ಇಂದು ಆರ್‌ಸಿಬಿ ವರ್ಸಸ್ ಪಂಜಾಬ್‌ ಕಿಂಗ್ಸ್‌ ಹೋರಾಟ ನಡೆಯಲಿದೆ!

ಹೌದು. ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್‌ ತಂಡಗಳ ನಡುವಿನ ಗೆಲುವಿಗಾಗಿ ಪೈಪೋಟಿ ನಡೆಯಲಿದ್ದು, ಎಲ್ಲರ ಕುತೂಹಲ ಕೆರಳಿಸಿದೆ.

ಭರ್ಜರಿ ಆರಂಭ ಕಂಡಿರುವ ಆರ್‌ಸಿಬಿ ಗೆಲುವಿನ ಲಯದಲ್ಲಿದೆ. ಆದರೆ ಪಂಜಾಬ್ ಪರಿಸ್ಥಿತಿ ಬೇರೆಯೇ ಆಗಿದೆ. ವಿಂಡೀಸ್‌ ಆಟಗಾರರಾದ ಕ್ರಿಸ್‌ ಗೇಲ್‌ ಮತ್ತು ನಿಕೋಲಸ್‌ ಪೂರಣ್‌ ಅವರ ಸತತ ಬ್ಯಾಟಿಂಗ್‌ ವೈಫ‌ಲ್ಯ ಪಂಜಾಬ್‌ ತಂಡಕ್ಕೆ ಹಿನ್ನಡೆಯಾಗುತ್ತಿದೆ.

ನ್ಯೂಜಿಲ್ಯಾಂಡ್‌ ವೇಗಿ ಸ್ಕಾಟ್‌ ಕ್ಯುಗೆಲೀನ್‌ ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕ್ಯುಗೆಲೀನ್‌ 2019ರಲ್ಲಿ ಚೆನ್ನೈ ಪರ ಆಡಿದ್ದರು.