ತೆರೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ ‘ರವಿ ಬೋಪಣ್ಣ’

Promotion

ಬೆಂಗಳೂರು, ಆಗಸ್ಟ್ 10, 2022 (www.justkannada.in): ಕ್ರೇಜಿಸ್ಟಾರ್ ನಟನೆಯ ಬಹುನೀರಿಕ್ಷಿತ ಸಿನಿಮಾ ‘ರವಿ ಬೋಪಣ್ಣ’ ಆಗಸ್ಟ್ 12 ರಂದು ತೆರೆ ಮೇಲೆ ಕಮಲ್ ಮಾಡಲು ಬರುತ್ತಿದೆ.

ಅಂದಹಾಗೆ ‘ರವಿ ಬೋಪಣ್ಣ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆಯಿತು. ಇದರಲ್ಲಿ ತಾರೆಯರ ಸಮಾಗಮವೇ ಆಗಿತ್ತು. ಕಿಚ್ಚ ಸುದೀಪ್, ಜಗ್ಗೇಶ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರವಿಚಂದ್ರನ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.

ಸಾಲು ಸಾಲು ಸಿನಿಮಾ ಮಾಡಿದ್ರೂ ಕೂಡ ಹಣ ಮುಖ್ಯ ಅಲ್ಲ ಸಿನಿಮಾವೇ ಮುಖ್ಯ ಅನ್ನೋದನ್ನ ಸಾರಿ ಸಾರಿ ಹೇಳಿದ ನಟ ರವಿಚಂದ್ರನ್.

ಚಿತ್ರದ ಬಗ್ಗೆ ಅವರು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಭಿಮಾನಿಗಳು ಹಿಂದೆ ಎಂದೂ ನೋಡದ ಪಾತ್ರ ಇದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.