ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಗೊತ್ತಿಲ್ಲ: ಟ್ವಿಟ್ ಮಾಡಿದವರನ್ನೇ ಕೇಳಿ- ಮಾಜಿ ಸಿಎಂ ಸಿದ್ಧರಾಮಯ್ಯ.

ಹುಬ್ಬಳ್ಳಿ,ಆಗಸ್ಟ್,10,2022(www.justkannada.in): ಯಡಿಯೂರಪ್ಪ ಬದಲಾವಣೆ ಬಗ್ಗೆ ನನಗೆ ಗೊತ್ತಿತ್ತು.  ಹಾಗಾಗಿ ಬಿಎಸ್ ವೈ ಚೇಂಜ್ ಆಗ್ತಾರೆ ಅಂತಾ ಹೇಳಿದ್ದೆ. ಆದರೆ ಬೊಮ್ಮಾಯಿ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಟ್ವೀಟ್ ಮಾಡಿದವರನ್ನೇ ಕೇಳಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಮೂರನೇಯವರಾದ್ರು ಸಿಎಂ ಆಗಲಿ, ನಾಲ್ಕನೇಯವರಾದ್ರೂ  ಸಿಎಂ ಆಗಲಿ. ಸಿಎಂ ಬದಲಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಟ್ವೀಟ್ ಮಾಡಿದವರನ್ನ ಹೋಗಿ ಕೇಳಿ, ನಾನಂತೂ ಟ್ವೀಟ್ ಮಾಡಿಲ್ಲ ಎಂದು ಹೇಳಿದರು.

ಹರ್ ಘರ್ ತಿರಂಗಾ ಅಭಿಯಾನ ನಾಟಕ ಅಂತ ಹೇಳಿದ್ದೆ ಸಾವರ್ಕರ್ ತ್ರಿವರ್ಣ ಧ್ವಜ ವಿರೋಧಿಸಿದ್ರು ಎಂದಿದ್ದೆ.  ಇದ್ದಿದ್ದನ್ನ ಇದ್ದಂಗೆ ಹೇಳಿದ್ರೆ ರಾಜಕೀಯನಾ..? ನಾಗಪುರ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಾರಾ..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

Key words: I don’t- know -about -CM –change-siddaramaiah

ENGLISH SUMMARY..

I don’t know about change of CM: Please ask who tweeted – Former CM Siddaramaiah
Hubballi, August 10, 2022 (www.justkannada.in): “I knew that Yediyurappa would be replaced when he was the CM. That is why I had told he would be replaced. But I don’t know about Bommai. Please ask the person who has tweeted,” informed leader of the opposition Siddaramaiah.
Speaking in Hubballi today, Siddaramaiah said, let there be a third or fourth CM. “We are not concerned about it. Please go and ask the person who has tweeted it, I have not tweeted,” he said.
“I had told that the Har Ghar Tiranga campaign is a drama, I had told that Savarkar had opposed the tricolor. Do you call the truth as politics? Will they hoist the national flag on the Nagpur RSS Office?,” he questioned.
Keywords: Siddaramaiah/ BJP/ CM/ change