ಮಾ.12ರಿಂದ ಮೈಸೂರಿನಲ್ಲಿ ನಾಲ್ಕು ದಿನಗಳ ಕಾಲ ರಾಷ್ಟ್ರೀಯ ರಂಗ ಉತ್ಸವ….

Promotion

ಮೈಸೂರು,ಮಾ,9,2020(www.justkannada.in): ಅಭಿಯಂತರರು ಸಂಸ್ಥೆ ವತಿಯಿಂದ ಮಾರ್ಚ್ 12ರಿಂದ ಮೈಸೂರಿನಲ್ಲಿ ರಾಷ್ಟ್ರೀಯ ರಂಗ ಉತ್ಸವವನ್ನ ಆಯೋಜಿಸಲಾಗಿದೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅಭಿಯಂತರರು ಸಂಸ್ಥೆ ಅಧ್ಯಕ್ಷ ಸುರೇಶ್ ಬಾಬು, ಅಭಿಯಂತರರು ಸಂಸ್ಥೆಯ 28 ನೇ ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ 12 ರಿಂದ 15ರವರಗೆ ನಾಲ್ಕು ದಿನಗಳ ರಾಷ್ಟ್ರೀಯ ರಂಗ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ರಂಗ ಉತ್ಸವ ನಡೆಯಲಿದ್ದು, ರಾಷ್ಟ್ರದ ನಾಲ್ಕು ಅತ್ಯುತ್ತಮ ನಾಟಕಗಳ ಪ್ರದರ್ಶನ ಮತ್ತು ನಾಡಿನ ಹೆಸರಾಂತ ಗಾಯಕರಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ರಂಗ ಉತ್ಸವ ಕಾರ್ಯಕ್ರಮಕ್ಕೆ ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಉದ್ಘಾಟನೆ ಮಾಡಲಿದ್ದಾರೆ. ಇಂಜಿನಿಯರ್‌ ಗಳಿಂ ದ, ಇಂಜಿನಿಯರ್‌ಗಳಿಗಾಗಿ ಸ್ಥಾಪಿಸಿದ ಅಭಿಯಂತರರು ಸಂಸ್ಥೆಯಿಂದ ಪ್ರತೀ ವರ್ಷ ವಿನೂತನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸುರೇಶ್ ಬಾಬು ತಿಳಿಸಿದರು.

Key words:  rastriya ranga utsav-mysore – four days