ಸಿಸಿಬಿ ಪೊಲೀಸರ ದಾಳಿ:  ಅಕ್ರಮವಾಗಿ ಕುದುರೆ ರೇಸ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ  8 ಮಂದಿ ಅರೆಸ್ಟ್…

ಮೈಸೂರು,ಮಾ,9,2020(www.justkannada.in): ಮೈಸೂರು ರೇಸ್ ಕೋರ್ಸ್ ಗೆ ದಾಳಿ ನಡೆಸಿದ  ಸಿಸಿಬಿ ಪೊಲೀಸರು  ಅಕ್ರಮವಾಗಿ ಕುದುರೆ ಜೂಜಾಡುತ್ತಿದ್ದ 8 ಮಂದಿಯನ್ನ ಬಂಧಿಸಿದ್ದಾರೆ.

ವಿಶ್ವನಾಥ್, ಹರೀಶ್,  ಅಮೀನ್,  ಸುನೀಲ್ ಕುಮಾರ್, ಸಿ.ಎನ್ ಪ್ರಕಾಶ್, ಶ್ರೀನಿವಾಸ್, ಶಶಿಕುಮಾರ್,  ಶಂಕರ್ ಬಂಧಿತ ಆರೋಪಿಗಳು.  ಬಂಧಿತ ಆರೋಪಿಗಳಿಂದ 2,32,910. ರೂ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಸ್ ಕೋರ್ಸ್ ಷರತ್ತುಗಳನ್ನು ಉಲ್ಲಂಘಿಸಿ 8 ಮಂದಿ ಆರೋಪಿಗಳು ಜೂಜಾಡುತ್ತಿದ್ದರು ಎನ್ನಲಾಗಿದೆ.

ಈ ಹಿನ್ನೆಲೆ 8 ಮಂದಿಯನ್ನ ಬಂಧಿಸಲಾಗಿದ್ದು,  ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  mysore-CCB –attack-Arrest  – horse race -betting -scandal.