ಫೆ.11ರಂದು ಮೈಸೂರಿನಲ್ಲಿ ರಾಷ್ಟ್ರೀಯ ಲೋಕ್ ಅದಾಲತ್- ನ್ಯಾ.ಜಿಎಸ್ ಸಂಗ್ರೇಶಿ ಮಾಹಿತಿ.

Promotion

ಮೈಸೂರು,ಫೆಬ್ರವರಿ,7,2023(www.justkannada.in): ಕರ್ನಾಟಕ ರಾಜ್ಯ ಕಾನೂನು ಸೇವೆಗಳ  ಪ್ರಾಧಿಕಾರದ ನಿರ್ದೇಶನ ಮೇರೆಗೆ ಫೆಬ್ರವರಿ 11ರಂದು ಮೈಸೂರಿನಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಜಿಎಸ್ ಸಂಗ್ರೇಶಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ  ನ್ಯಾಯಾಧೀಶ ಜಿಎಸ್ ಸಂಗ್ರೇಶಿ, ಮೈಸೂರು ಜಿಲ್ಲೆಯಾದ್ಯಂತ ಬಾಕಿ ಇರುವ  1,11,496 ಪ್ರಕರಣಗಳು ಲೋಕ್ ಅದಾಲತ್ ನಲ್ಲಿ ವಿಚಾರಣೆ ನಡೆಯಲಿದೆ. ಈ ಪೈಕಿ 59872 ಸಿವಿಲ್ ಪ್ರಕರಣಗಳು ಹಾಗೂ 62403 ಕ್ರಿಮಿನಲ್ ಪ್ರಕರಣಗಳು . ಸದರಿ ಪ್ರಕರಣಗಳಲ್ಲಿ 34739 ಪ್ರಕರಣಗಳು ಇತ್ಯರ್ಥವಾಗುವ ಸಂಭವವಿದೆ ಎಂದರು.  

ಸಂಚಾರಿ ಇ ಚಲನ್ ಮೂಲಕ ವಿಧಿಸಿದ ದಂಡ ಮೊತ್ತದಲ್ಲಿ ರಿಯಾಯಿತಿ ಪ್ರಕಟಿಸಿರುವ ಹಿನ್ನಲೆ, ಸರ್ಕಾರದ ಆದೇಶದಂತೆ ಪಾಲನೆ ಮಾಡಲು ಕರೆ ನೀಡಿದ ನ್ಯಾಯಾಧೀಶ ಜಿಎಸ್ ಸಂಗ್ರೇಶಿ, ಫೆಬ್ರವರಿ 11ರೊಳಗೆ ದಂಡ ಪಾವತಿಸಿ. ಶೇ. 50 ರಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಿ ಇದೇ ಫೆಬ್ರವರಿ 11 ರವರಗೆ ಅವಕಾಶ ಇರುತ್ತದೆ. 68768 ಪ್ರಕರಣಗಳು ದಾಖಲಾಗಿದ್ದವು. ಸರ್ಕಾರದ ಆದೇಶ ಹೊರ ಬಿದ್ದ ಕೇವಲ ಐದೇ ದಿನದಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹವಾಗಿದೆ. 1ಕೋಟಿ,45 ಸಾವಿರದ 26 ಸಾವಿರದ ಐದುನೂರು(145,26500) ರೂ ಸಂಗ್ರಹವಾಗಿದೆ. ಆದಷ್ಟು ಬೇಗ ದಂಡ ಪಾವತಿಸಿ ಪ್ರಕರಣಗಳನ್ನ ಇತ್ಯರ್ಥ ಮಾಡಿಕೊಳ್ಳಿ ಎಂದು ಸಾರ್ವಜನಿಕರಿಗೆ ಕರೆ ಕೊಟ್ಟರು.

Key words: Rashtriya Lok Adalat-Mysore-Feb 11- Hearing – 1,11496 cases-judge-GS Sangreshi.