ನಾಗಚೈತನ್ಯ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ

Promotion

ಬೆಂಗಳೂರು, ಆಗಸ್ಟ್ 10, 2022 (www.justkannada.in): ನಟ ನಾಗಚೈತನ್ಯ ಜತೆ ಕೊಡಗಿನ ಬೆಡಗಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಪರಶುರಾಮ್​ ಅವರು ನಾಗ ಚೈತನ್ಯ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಸದ್ಯ, ಬಾಲಿವುಡ್, ಟಾಲಿವುಡ್, ಕಾಲಿವುಡ್​​ನಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವ ಸೂಚನೆ ಸಿಕ್ಕಿದೆ.

. ‘ಸೀತಾ ರಾಮಂ’ ಗೆಲುವಿನ ಖುಷಿಯಲ್ಲಿರುವ ರಶ್ಮಿಕಾ ಈ ವಿಚಾರ ಕೇಳಿ ರಶ್ಮಿಕಾ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ.

ನಿರ್ದೇಶಕ ಪರಶುರಾಮ್ ಅವರ ಆಸೆ. ರಶ್ಮಿಕಾ ಸಿನಿಮಾದ ಕಥೆ ಕೇಳಿ ಇಷ್ಟಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಇನ್ನು ಅಧಿಕೃತವಾಗಿ ಪ್ರಕಟವಾಗಿಲ್ಲ.