ದೇಶ ವಿದೇಶಗಳಲ್ಲಿ ಹಾರಾಟಕ್ಕೆ ಸಜ್ಜಾದ ಭಟ್ಟರ ‘ಗಾಳಿಪಟ-2’

ಬೆಂಗಳೂರು, ಆಗಸ್ಟ್ 10, 2022 (www.justkannada.in): ಈ ಶುಕ್ರವಾರದಿಂದ (ಆಗಸ್ಟ್ 12) ಏಕಕಾಲಕ್ಕೆ ದೇಶ ವಿದೇಶಗಳಲ್ಲಿ ‘ಗಾಳಿಪಟ-2’ ಹಾರಾಟ ಶುರುವಾಗಲಿದೆ.

ಹೌದು ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್ ಹಾಗೂ ಲೂಸಿಯಾ ಪವನ್ ಕುಮಾರ್ ನಟನೆಯ ‘ಗಾಳಿಪಟ-2’ ಸಿನಿಮಾ ಬಿಡುಗಡೆಗೆ ಇನ್ನೆರಡೇ ದಿನ ಬಾಕಿ ಇದೆ.

ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. 14 ವರ್ಷಗಳ ಹಿಂದೆ ‘ಗಾಳಿಪಟ’ ಸಿನಿಮಾ ರಿಲೀಸ್ ಆಗಿ 175 ದಿನ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು.

ಅದೇ ಟೈಟಲ್‌ನಲ್ಲಿ ಹೊಸ ಕಥೆ ಹೆಣೆದು ಮೂವರು ಸ್ನೇಹಿತರ ಸ್ನೇಹ ಪ್ರೀತಿ ಗೀತಿ ಇತ್ಯಾದಿ ಕಥೆ ಹೇಳಲು ಯೋಗರಾಜ್ ಭಟ್ ಬರ್ತಿದ್ದಾರೆ. ಓವರ್‌ಸೀಸ್‌ನಲ್ಲೂ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.