ಬಾಲಿವುಡ್ ಆಲ್ಬಮ್ ಸಾಂಗ್’ನಲ್ಲಿ ರಶ್ಮಿಕಾ ಸ್ಟೆಪ್ !

Promotion

ಬೆಂಗಳೂರು, ಡಿಸೆಂಬರ್ 17, 2020 (www.justkannada.in): ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಆಲ್ಬಮ್‌ ಸಾಂಗ್‌’ಗೆ ಹೆಜ್ಜೆ ಹಾಕಲಿದ್ದಾರೆ.

ಸದ್ಯ ಟಾಲಿವುಡ್, ತಮಿಳು ಸಿನಿರಂಗದಲ್ಲಿ ಸಾಕಷ್ಟು ಅವಕಾಶ ಪಡೆದು ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಸಿಕ್ಕ ಸಣ್ಣ ಅವಕಾಶವನ್ನು ದೊಡ್ಡದಾಗಿ ಬಳಸಿಕೊಳ್ಳುವ ತವಕದಲ್ಲಿದ್ದಾರೆ.

ಖ್ಯಾತ ಬಾಲಿವುಡ್ ರ್ಯಾಪರ್ ಬಾದ್‌ಶಾಹ್ ಆಲ್ಬಮ್ ಸಾಂಗ್ ಗೆ ರಶ್ಮಿಕಾ ಸ್ಟೆಪ್ ಹಾಕಲಿದ್ದಾರೆ. ಚಂಡೀಘಡ್‌ನಲ್ಲಿ ಈ ಆಲ್ಬಂನ್‌ ಶೂಟಿಂಗ್ ಅರ್ಧ ಮುಗಿದಿದ್ದು, ಇದರಲ್ಲಿ ರಶ್ಮಿಕಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರಂತೆ.
ಇನ್ನು ಅಲ್ಲು ಅರ್ಜುನ್ ಚಿತ್ರ ‘ಪುಷ್ಪ’ದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.